ಮುಂಬೈ : ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ತೊಳಲಾಟದಲ್ಲಿರುವ ಶೇರುಪೇಟೆಯಿಂದಾಗಿ ಹೂಡಿಕೆದಾರರು ಚಿನ್ನ ಖರೀದಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದರಿಂದ ಚಿನನ್ನದ ದರ 14,700ಕ್ಕೆ ತಲುಪಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದೆ.
ಚಿನ್ನದ ದರ ಗಗನಕುಸಮವಾಗುತ್ತಿದ್ದಂತೆ ಬೆಳ್ಳಿಯ ದರವು ಕೂಡಾ ದರ ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಶೇರುಪೇಟೆಯ ಹೂಡಿಕೆದಾರರು ಶೇರುಪೇಟೆಯ ತೊಳಲಾಟದಿಂದಾಗಿ ಹೆಚ್ಚಿನ ಆದ್ಯತೆಯನ್ನು ಚಿನ್ನದ ಖರೀದಿಗೆ ನೀಡಿದ್ದರಿಂದ ದರ ಏರಿಕೆಗೆ ಕಾರಣವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 14,390 ರೂ.ಗಳಾಗಿದ್ದು ಶುಕ್ರವಾರದಂದು 315 ರೂಪಾಯಿಗಳ ಏರಿಕೆಯಾಗಿ 14,705 ರೂ.ಗಳಿಗೆ ತಲುಪಿದೆ. |