ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಡೀಢಿರನೆ ಪ್ರಯಾಣ ಟಿಕೆಟ್ ದರಗಳಲ್ಲಿ ಏರಿಕೆ ಮಾಡಿದ್ದರಿಂದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಸಮಧಾನ ವ್ಯಕ್ತಪಡಿಸಿ ದರ ಏರಿಕೆಗೆ ಕಾರಣ ಕೊಡಿ ಎಂದು ಪ್ರಶ್ನಿಸಿದೆ.
ದರ ಏರಿಕೆ ಕುರಿತಂತೆ ವಿಮಾನಯಾನ ಸಂಸ್ಥೆಗಳು ಶನಿವಾರದೊಳಗೆ ಸಚಿವಾಲಯಕ್ಕೆ ಉತ್ತರಿಸುವಂತೆ ಆದೇಶಿಸಿದೆ.ಕೆಲ ತಿಂಗಳುಗಳ ಹಿಂದೆ ವಿಮಾನಯಾನ ಸಂಸ್ಥೆಗಳು ಇಂಧನ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಮೂಲದರದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿದ್ದವು.
ಇಂಧನ ದರದಲ್ಲಿ ಅತ್ಯಧಿಕ ಇಳಿಕೆಯಾಗುತ್ತಿರುವಾಗ ಪ್ರಯಾಣ ದರದ ಹೆಚ್ಚಳಕ್ಕೆ ದರ ಏರಿಕೆ ನಿರ್ಧಾರಕ್ಕೆ ವಿಮಾನಯಾನ ಸಂಸ್ಥೆಗಳು ಬಂದಿರುವುದು ದುರದೃಷ್ಟಕರ ಎಂದು ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿಕೆ ನೀಡಿ ಅಮಧಾನ ವ್ಯಕ್ತಪಡಿಸಿದ್ದಾರೆ. |