ನವದೆಹಲಿ : ದೇಶದ ಪ್ರಮುಖ ವಾಹನೋದ್ಯಮ ಸಂಸ್ಥೆ ಟಾಟಾ ಮೋಟಾರ್ಸ್ ಮತ್ತು ಕಾರ್ಪೋರೇಶನ್ ಬ್ಯಾಂಕ್ ನಡುವೆ ಹಣಕಾಸು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
ಟಾಟಾ ಮೋಟಾರ್ಸ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತುರ್ತು ಹಣಕಾಸು ನೆರವು ಒದಗಿಸಲು ಕಾರ್ಪೋರೇಶನ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಪೋರೇಶನ್ ಬ್ಯಾಂಕಿನ 1073 ಶಾಖೆಗಳಲ್ಲಿ ಮತ್ತು ಟಾಟಾ ಮೋಟಾರ್ಸ್‌ನ ಮಾರಾಟ ಮಳಿಗೆಗಳಲ್ಲಿ ವಾಹನ ಖರೀದಿಸುವ ಗ್ರಾಹಕರಿಗೆ ಸಾಲ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
ಕಾರ್ಪೋರೇಶನ್ ಬ್ಯಾಂಕ್ ವಾರ್ಷಿಕ ಶೇ.11.75ರ ಬಡ್ಡಿ ದರದಲ್ಲಿ ವಾಹನ ದರದ ಶೇ.85 ರಷ್ಟು ಸಾಲ ಒದಗಿಸುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. |