ಮುಂಬೈ : ಏಷ್ಯಾ ಶೇರುಪೇಟೆಗಳ ಇತ್ತಮ ವಹಿವಾಟಿನಿಂದಾಗಿ ದೇಶಿಯ ಶೇರುಪೇಟೆಗಳು ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ 11 ಪೈಸೆ ಹೆಚ್ಚಳವಾಗಿದೆ.
ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 48.84/85 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 11 ಪೈಸೆ ಹೆಚ್ಚಳವಾಗಿ 48.73 ರೂ.ಗಳಿಗೆ ತಲುಪಿದೆ.
ಏಷ್ಯಾ ಶೇರುಪೇಟೆಗಳ ಉತ್ತಮ ವಹಿವಾಟಿನಿಂದಾಗಿ ದೇಶಿಯ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದರಿಂದ ಬಂಡವಾಳದ ಒಳಹರಿವು ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಕರೆನ್ಸಿಗಳ ಮುಂದೆ ಡಾಲರ್ ದುರ್ಬಲವಾಗಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. |