ಸಿಂಗಾಪೂರ್ : ಅಮೆರಿಕದಲ್ಲಿ ಇಂಧನ ಗ್ರಾಹಕರ ಬೇಡಿಕೆ ಕುಸಿತವಾಗಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 34 ಡಾಲರ್‌ಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಯಾರ್ಕ್ ಮಾರುಕಟ್ಟೆಯ ಮಾರ್ಚ್ ತಿಂಗಳ ವಿತರಣೆಯಲ್ಲಿ ಸಾದಾ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 60 ಸೆಂಟ್‌ಗಳ ಇಳಿಕೆಯಾಗಿ 34.58 ಡಾಲರ್‌ಗಳಿಗೆ ತಲುಪಿದೆ.
ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳಿಗೆ ತಲುಪಿದ್ದ ತೈಲ ದರ ಪ್ರಸಕ್ತವಾಗಿ 34 ಡಾಲರ್‌ಗಳಿಗೆ ತಲುಪಿದೆ.
ಅಮೆರಿಕದ ಆರ್ಥಿಕ ಕುಸಿತ ನಿಧಾನವಾಗಿ ಆಳಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ತೈಲ ಬೇಡಿಕೆ ಕುಸಿಯುತ್ತಿರುವುದರಿಂದ ಹೂಡಿಕೆದಾರರಿಗೆ ಆಂತಕ ಉಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ. |