ಕೇಂದ್ರ ಸರಕಾರದಿಂದ ಬೃಹತ್ ಆರ್ಥಿಕ ರಿಯಾಯತಿಯನ್ನು ನಿರೀಕ್ಷಿಸಿದೇ ಯುರೋಪ್ ಮತ್ತು ಅಮೆರಿಕ ದೇಶಗಳ ರಫ್ತು ಕುಸಿತವನ್ನು ಎದುರಿಸುವುದು ಅವಶ್ಯಕವಾಗಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ಹೇಳಿದ್ದಾರೆ.
ಯುರೋಪ್ ಮತ್ತು ಅಮೆರಿಕ ದೇಶಗಳ ಸಮಸ್ಯೆಗಳಿಗೆ ಕೇಂದ್ರ ಸರಕಾರ ಪರಿಹಾರ ಸೂಚಿಸಲು ಸಾಧ್ಯವಿಲ್ಲ. ಯುರೋಪ್ ಮತ್ತು ಅಮೆರಿಕ ರಾಷ್ಟ್ರಗಳ ಆರ್ಥಿಕ ಕುಸಿತವನ್ನು ತಡೆಯಲು ಕೇಂದ್ರ ಸರಕಾರ ಪ್ಯಾಕೇಜ್ ಘೋಷಿಸಲು ಸಾಧ್ಯವಿಲ್ಲ ಎಂದು ಸಚಿವ ಕಮಲ್‌ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರಕಾರ ವಜ್ರ ಮತ್ತು ಆಭರಣಗಳು ಹಾಗೂ ಜವಳಿ ಉತ್ಪನ್ನಗಳಿಗೆ ಬೇಡಿಕೆ ಸಲ್ಲಿಸಲು ಸಾಧ್ಯವಿಲ್ಲವಾದ್ದರಿಂದ ಜಾಗತಿಕ ಆರ್ಥಿಕ ಕುಸಿತದಿಂದಾಗಿ ರಫ್ತುವಹಿವಾಟಿನ ಕೆಲ ಕ್ಷೇತ್ರಗಳು ಕುಸಿತಗೊಂಡಿವೆ ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.
ಆರ್ಥಿಕ ಕುಸಿತವನ್ನು ತಡೆಯಲು ಕೇಂದ್ರ ಸರಕಾರ ಡಿಸೆಂಬರ್ 8 ರಂದು ಮೊದಲ ಪ್ಯಾಕೇಜ್ ಬಿಡುಗಡೆ ಮಾಡಿ ಕೆಲ ರಿಯಾಯತಿಗಳನ್ನು ಘೋಷಿಸಿದ್ದು, ಕಾರ್ಮಿಕ ಆಧಾರಿತ ರಫ್ತು (ಟೆಕ್ಸ್‌ಟೈಲ್ಸ್, ಲೆದರ್, ಮರೈನ್ ಉತ್ಪನ್ನಗಳು)ಕ್ಷೇತ್ರಗಳಿಗೆ ಆದ್ಯತೆ ನೀಡಿತ್ತು ಎಂದು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ರಫ್ತು ಕ್ಷೇತ್ರದಲ್ಲಿ ಮುಂಬರುವ ಮಾರ್ಚ್ ವೇಳೆಗೆ ಸುಮಾರು 15 ಲಕ್ಷ ಮಂದಿ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಆತಂಕ ವ್ಯಕ್ತಪಡಿಸಿದ್ದಾರೆ. |