ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ವಿಚಾರಣೆಯ ನಂತರ ಗಂಭೀರ ಅಪರಾಧ ಪತ್ತೆ ದಳ 7800 ಕೋಟಿ ರೂ. ವಂಚನೆ ಹಗರಣ ನಡೆಸಿದ ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ಮತ್ತು ಇತರರನ್ನು ತನಿಖೆಗೊಳಪಡಿಸಲು ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಆರನೇ ಹೆಚ್ಚುವರಿ ನ್ಯಾಯಾಧೀಶರು ಸತ್ಯಂ ಸಂಸ್ಥಾಪಕ ರಾಜು ಹಾಗೂ ಆತನ ಸಹೋದರರನ್ನು ವಿಚಾರಣೆ ನಡೆಸಲು ಅನುಮತಿಯನ್ನು ನೀಡಿದೆ. ಸತ್ಯಂನ ಮಾಜಿ ಆರ್ಥಿಕ ವಿಭಾಗದ ಮುಖ್ಯಸ್ಥ ವಾಡ್ಲಾಮನಿ ಶ್ರೀನಿವಾಸ್ ಪಿಡಬ್ಲೂಸಿ ಉದ್ಯೋಗಿ ಎಸ್.ಗೋಪಾಲಕೃಷ್ಣನ್ ಮತ್ತು ತಲ್ಲೂರಿ ಶ್ರೀನಿವಾಸ್ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಲಿದೆ.
ರಾಮಲಿಂಗಾರಾಜು ಹಾಗೂ ಇತರರನ್ನು ಆರೋಪಿಗಳ ವಕೀಲರ ಸಮ್ಮುಖದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಚಾರಣೆ ನಡೆಸಲು ನ್ಯಾಯಾಲಯ ಅವಕಾಶ ನೀಡಿದೆ ಎಂದು ಗಂಭೀರ ಅಪರಾಧ ಪತ್ತೆ ದಳ (ಎಸ್‌ಎಫ್‌ಐಒ)ದ ಅಧಿಕಾರಿಗಳು ತಿಳಿಸಿದ್ದಾರೆ.
ಜನೆವರಿ 23 ರಂದು ಗಂಭೀರ ಅಪರಾಧ ಪತ್ತೆ ದಳ (ಎಸ್‌ಎಫ್‌ಐಒ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ರಾಜು ಹಾಗೂ ಇತರರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಿತ್ತು. |