ಜಾಗತಿಕ ಆರ್ಥಿಕ ಕುಸಿತದಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರಗಳಿಗೆ ಸಹಾಯವನ್ನು ನೀಡುತ್ತಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ 100 ಬಿಲಿಯನ್ ಡಾಲರ್ ಸಾಲ ನೀಡಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಆರ್ತಿಕ ಕುಸಿತ ತಡೆಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತಂತೆ ಚರ್ಚಿಸಲು ಏಳು ರಾಷ್ಟ್ರಗಳ ವಿತ್ತ ಸಚಿವರು ಸಭೆ ಸೇರಲಿರುವ ಹಿನ್ನೆಲೆಯಲ್ಲಿ ಜಪಾನ್ ಐಎಂಎಫ್‌ಗೆ ಸಾಲ ನೀಡಲು ಸಮ್ಮತಿಸಿದೆ.
ಜಪಾನ್‌ನಿಂದ 100 ಬಿಲಿಯನ್ ಡಾಲರ್ ಸಾಲಪಡೆದಿರುವುದು ಕೇವಲ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಗೆ ಮಾತ್ರ ಮಹತ್ವದ್ದಲ್ಲ ಆರ್ಥಿಕ ಕುಸಿತದಿಂದ ಬಳಲುತ್ತಿರುವ ರಾಷ್ಟ್ರಗಳಿಗೆ ಕೂಡಾ ಮಹತ್ವದ್ದಾಗಿದೆ ಎಂದು ಐಎಂಎಫ್ ನಿರ್ದೇಶಕ ಡೊಮಿನಿಕಿ ಸ್ಟ್ರಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. |