ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿಯವರನ್ನು ಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆಯವರ ಅಂತಾರಾಷ್ಟ್ರೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ಫೋಸಿಸ್ ನಾರಾಯಣ ಮೂರ್ತಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೂಡಿಕೆಯನ್ನು ಹೆಚ್ಚಿಸಲು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆಯವರ ಅಂತಾರಾಷ್ಟ್ರೀಯ ಸಲಹೆಗಾರರಾಗಲು ಸಮ್ಮತಿಸಿದ್ದಾರೆ ಎಂದು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಪಲಿತಾ ಕೊಹೊನಾ ತಿಳಿಸಿದ್ದಾರೆ.
ರಾಷ್ಟ್ರಾಧ್ಯಕ್ಷರ ಸಚಿವಾಲಯದಲ್ಲಿ ನಡೆದ 2009- ಇಂಗ್ಲೀಷ್ ಮತ್ತು ಮಾಹಿತಿ ತಂತ್ರಜ್ಞಾನ ವರ್ಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಹ್ವಾನಿಸಿದ ನಂತರ ಅಧ್ಯಕ್ಷ ರಾಜಪಕ್ಸೆ ನೇಮಕ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೆಲ ವರ್ಷಗಳಲ್ಲಿಯೇ ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯನಾಗಿ ಬೆಳೆದಿರುವುದು ನಮಗೆ ಸ್ಪೂರ್ತಿ ನೀಡಿದೆ ಎಂದು ರಾಜಪಕ್ಸೆ ಸಮಾರಂಭದಲ್ಲಿ ತಿಳಿಸಿದ್ದಾರೆ. |