ದೇಶದ ಆರ್ಥಿಕ ಅಭಿವೃದ್ಧಿ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿದ್ದು, ಆರ್ಥಿಕ ಸಾಲಿನ ಕೊನೆಯ ಆರು ತಿಂಗಳಲ್ಲಿ ಶೇ.7ಕ್ಕೆ ತಲುಪಲಿರುವುದರಿಂದ ಮತ್ತಷ್ಟು ಪ್ಯಾಕೇಜ್‌ಗಳನ್ನು ಘೋಷಿಸುವ ಅನಿವಾರ್ಯತೆಯಿದೆ ಎಂದು ಕೈಗಾರಿಕೋದ್ಯಮ ಸಂಘ ಸಿಐಐ ಹೇಳಿಕೆ ನೀಡಿದೆ.
ಮುಂಬರುವ 2009-10 ರ ಆರ್ಥಿಕ ಸಾಲಿನಲ್ಲಿ ದರಗಳನ್ನು ಮತ್ತಷ್ಟು ಕುಸಿಯುವ ಸಾಧ್ಯತೆಗಲಿರುವುದರಿಂದ ದರಗಳನ್ನು ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ವಿತ್ತ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸೇವೆ ಕ್ಷೇತ್ರ ಸಂಪೂರ್ಣ ಅಸ್ತವ್ಯಸ್ಥವಾಗಿರುವುದರಿಂದ ಮುಂಬರುವ ದಿನಗಳಲ್ಲಿ ವಹಿವಾಟು ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕಿಂಗ್, ಹಣಕಾಸು, ರಿಯಲ್ ಎಸ್ಟೇಟ್, ಟ್ರೇಡ್ ,ಹೋಟೆಲ್ ಮತ್ತು ಸಾಗಾಣಿಕೆ ಕ್ಷೇತ್ರಗಳು ಆರ್ತಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸೇವಾ ಕ್ಷೇತ್ರಗಳು ಮತ್ತಷ್ಟು ಕುಸಿಯಲಿದೆ ಎಂದು ಸಿಐಐ ಚೇಂಬರ್ ಅಧ್ಯಯನದ ವರದಿಯಲ್ಲಿ ತಿಳಿಸಿದೆ. |