ಹಣಕಾಸು ಖಾತೆಯನ್ನು ಹೊಂದಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ 2009-10 ರ ಮಧ್ಯಂತರ ಬಜೆಟ್ ಸಾಂದರ್ಭಿಕವಾಗಿರದೇ ರಾಜಕೀಯ ಪ್ರಕಟಣೆಯಾಗಿದೆ ಎಂದು ಭಾರತೀಯ ಕಂಪೆನಿಗಳು ಟೀಕಿಸಿವೆ.
ಮಧ್ಯಂತರ ಬಜೆಟ್ ಕೇವಲ ರಾಜಕೀಯ ಪ್ರೇರಿತವಾಗಿದ್ದು, ಮಂಡನೆಗೆ ಸಕಾಲವಾಗಿರಲಿಲ್ಲ. ಯವುದೇ ಕ್ಷೇತ್ರಗಳಿಗೆ ಅನುಕೂಲವಾಗುವಂತಹ ರಿಯಾಯತಿಗಳನ್ನು ಘೋಷಿಸಿಲ್ಲ .ರಿಯಲ್ ಎಸ್ಟೇಟ್ ಉದ್ಯಮವನ್ನು ಸಚಿವರು ಕಡೆಗೆಣಿಸಿದ್ದಾರೆ ಎಂದು ಪಾರ್ಶ್ವನಾಥ್ ಡೆವಲೆಪರ್ಸ್ ಮುಖ್ಯಸ್ಥ ಪ್ರದೀಪ್ ಜೈನ್ ಹೇಳಿದ್ದಾರೆ.
ಕೊಟಾಕ್ ಮಹೇಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೊಟಾಕ್ ಅವರು ಮಾತನಾಡಿ ಕೂಡಾ ಜೈನ್ ಅವರ ಟೀಕೆಯನ್ನು ಸಮರ್ಥಿಸಿ ಮಧ್ಯಂತರ ಬಜೆಟ್ ಮಂಡನೆಯಿಂದ ಯಾವುದೇ ಲಾಭವಾಗಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಕೆಲ ತಿಂಗಳುಗಳ ಹಿಂದೆ ಎರಡು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ್ದು, ಕೇವಲ ಬರಿ ಘೋಷಣೆಯಲ್ಲಿ ಮುಂದುವರಿದಿವೆ ನಮಗೆ ತುಂಬಾ ನಿರಾಸೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಸರಕಾರಕ್ಕೆ ಇತರ ಆಯ್ಕೆಗಳ ದಾರಿಗಳಿಲ್ಲವಾದ್ದರಿಂದ ತಕ್ಕಮಟ್ಟಿಗೆ ಉತ್ತಮ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ ಎಂದು ಹಿಂದೂಜಾ ಗ್ರೂಪ್ ಸಿಎಫ್‌ಒ ಪ್ರಬಲ್ ಬ್ಯಾನರ್ಜಿ ಹೇಳಿದ್ದಾರೆ. |