ದೇಶದ ಪ್ರಖ್ಯತ ಕಾರು ತಯಾರಿಕೆ ಕಂಪೆನಿಯಾದ ಬಿಎಂಡಬ್ಲೂ, ವಹಿವಾಟು ಕುಸಿತಗೊಂಡ ಹಿನ್ನೆಲೆಯಲ್ಲಿ 850 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಆಕ್ಸ್‌ಫರ್ಡ್‌ನ ಕೌಲೆ ಪ್ರದೇಶದಲ್ಲಿರುವ ಘಟಕವನ್ನು ವಾರದಾದ್ಯಂತ ಮುಚ್ಚಲಾಗಿದ್ದು ವಾರಂತ್ಯದ ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮಾರ್ಚ್ 2 ರಿಂದ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕೌಲೆ ಪ್ರದೇಶದಲ್ಲಿರುವ ಬಿಎಂಡಬ್ಲೂ ಘಟಕದಲ್ಲಿ ಸುಮಾರು 4700 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಅಂದಾಜು 800 ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.ಆದರೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಗ್ರಾಹಕರ ಬೇಡಿಕೆಯಲ್ಲಿ ಇಳಿಮುಖವಾಗಿದ್ದರಿಂದ ಆರ್ಥಿಕ ಬಿಕ್ಕಟ್ಟು ಸರಿಪಡಿಸಲು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಡಬ್ಲೂ ಕಂಪೆನಿಯ ಮಿನಿ ಮಾಡೆಲ್ ಕಾರು ಮಾರಾಟ 2008ರಲ್ಲಿ ಶೇ.4.3 ರಷ್ಟು ಏರಿಕೆಯಾಗಿ 232.425 ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಒಟ್ಟಾರೆ ಕಂಪೆನಿಯ ಕಾರುಗಳ ಮಾರಾಟ ಶೇ.5 ರಷ್ಟು ಕುಸಿತ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |