ಕೇಂದ್ರ ಸರಕಾರ ರಫ್ತು ವಹಿವಾಟುದಾರರಿಗೆ ನೀಡುತ್ತಿರುವ ಬಡ್ಡಿ ಅನುದಾನವನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಆದರೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಕಠಿಣ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಇನ್ನಷ್ಟು ಅನುದಾನಗಳನ್ನು ಘೋಷಿಸುವುದು ಅಗತ್ಯವಾಗಿದೆ ಎಂದು ರಫ್ತು ವಹಿವಾಟುದಾರರು ಹೇಳಿದ್ದಾರೆ.
ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸಾಗೋರತ್ತರ ಮಾರುಕಟ್ಟೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಫ್ತು ವಹಿವಾಟುದಾರರಿಗೆ ಬಡ್ಡಿ ಅನುದಾನವನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ಪ್ರಕಟಿಸಿದ್ದಾರೆ.
ಬಡ್ಡಿಯ ಮೇಲೆ ಶೇ.2ರಷ್ಟು ಅನುದಾನವನ್ನು ಸೆಪ್ಟಂಬರ್‌ವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ ಡಿಸೆಂಬರ್ ತಿಂಗಳವರೆಗೆ ಅನುದಾನವನ್ನು ವಿಸ್ತರಿಸುವ ಕುರಿತಂತೆ ನಿರೀಕ್ಷಿಸಲಾಗುತ್ತಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಜೇಶನ್ ಅಧ್ಯಕ್ಷ ಎ.ಶಕ್ತಿವೇಲು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಕಳೆದ 2008ರ ಆರಂಭಿಕ ಆರು ತಿಂಗಳಲ್ಲಿ ಶೇ.30 ರಷ್ಟು ರಫ್ತು ವಹಿವಾಟು ಏರಿಕೆ ಕಂಡಿದ್ದು, ಅಕ್ಟೋಬರ್ ತಿಂಗಳ ನಂತರ ರಫ್ತು ವಹಿವಾಟಿನಲ್ಲಿ ಶೇ.12.1 ರಷ್ಟು ಕುಸಿತ ಕಂಡಿದೆ ಎಂದು ವೇಲು ತಿಳಿಸಿದ್ದಾರೆ. |