ಆಂಧ್ರಪ್ರದೇಶದ ಸರಕಾರ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಹಗರಣವನ್ನು ಸೆಂಟಲ್ ಬ್ಯೂರೋ ಆಫ್ ಇನ್‌ವೆಸ್ಟೀಗೇಶನ್‌ಗೆ ವಹಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಸತ್ಯಂ ಹಗರಣ ಪ್ರಕರಣ ನಿಷ್ಪಕ್ಷಪಾತವಾಗಿ ನಡೆಯಲು ಸರಕಾರ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದ್ದು, ಸರಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಗೃಹ ಸಚಿವ ಕೆ.ಜನಾ ರೆಡ್ಡಿ ಹೇಳಿದ್ದಾರೆ. ದೇಶದ ಅತಿ ದೊಡ್ಡ ಹಗರಣವಾದ ಸತ್ಯಂ ಕಂಪೂಟರ್ಸ್ ಹಗರಣ ಸಿಬಿಐ ತನಿಖೆಯಿಂದ ನಿಷ್ಪಕ್ಷಪಾತವಾಗಿ ನಡೆಯಲಿದೆ. ಪ್ರಸ್ತುತ ಹಗರಣದ ತನಿಖೆಯನ್ನು ಗಂಭೀರ ಅಪರಾಧ ಪತ್ತೆ ದಳ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. |