ಕಳಂಕಪೀಡಿತ ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್‌ನ ಹಿರಿಯ ಉಪಾಧ್ಯಕ್ಷ ಅನಿಲ್ ಕುಮಾರ್ ಅವರನ್ನು ವಜಾಗೊಳಿಸಿ ನೂತನ ನಿರ್ದೇಶಕ ಮಂಡಳಿ ಆದೇಶ ಹೊರಡಿಸಿದೆ.
ಅಮೆರಿಕದಲ್ಲಿರುವ ಅನಿಲ್ ಕುಮಾರ್ ನೇರವಾಗಿ ಮಾಜಿ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಮೈನಾಮ್‌ಪತಿಯವರಿಗೆ ವರದಿಗಳನ್ನು ನೀಡುತ್ತಿದ್ದರು ಎಂದು ಆಪಾದಿಸಿಲಾಗಿದೆ.
ಅನಿಲ್‌ಕುಮಾರ್, ಬ್ಯಾಂಕಿಂಗ್ ಫೈನಾನ್ಸ್ ಮತ್ತು ವಿಮೆ ವಿಭಾಗವನ್ನು ನೋಡಿಕೊಳ್ಳುತ್ತಿದ್ದು, ಸತ್ಯಂನ 500 ಮಿಲಿಯನ್ ಡಾಲರ್ ವಹಿವಾಟನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಹುದ್ದೆಯನ್ನು ದೊರೆಯುವಂತೆ ಅನಿಲ್‌ಕುಮಾರ್ ಅವರಿಗೆ ನೂತನ ನಿರ್ದೇಶಕ ಮಂಡಳಿ ಆದೇಶ ನೀಡಿದ್ದು ವಜಾಕ್ಕೆ ಕಾರಣವೇನು ಎನ್ನುವುದನ್ನು ಬಹಿರಂಗಪಡಿಸಿಲ್ಲ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು 7 ಸಾವಿರ ಕೋಟಿ ರೂಪಾಯಿ ವಂಚಿಸಿ ರಾಜೀನಾಮೆ ನೀಡಿದ ನಂತರ, ಕಂಪೆನಿಯ ಹಿರಿಯ ಉಪಾಧ್ಯಕ್ಷ ಸ್ಥಾನದ ವ್ಯಕ್ತಿಯೊಬ್ಬರನ್ನು ವಜಾಗೊಳಿಸಿರುವುದು ಪ್ರಥಮ ಬಾರಿಯಾಗಿದೆ.
ಕಳೆದ ವಾರ ಹಿರಿಯ ಉಪಾಧ್ಯಕ್ಷರಾದ ಸುಬು.ಡಿ.ಸುಬ್ರಮಣ್ಯಂ ವ್ಯಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ನೂತನ ನಿರ್ದೇಶಕ ಮಂಡಳಿಗೆ ಮಾಹಿತಿ ನೀಡಿದ್ದರು. |