ಮುಂಬೈ : ಶೇರುಪೇಟೆಯ ವಹಿವಾಟು ದುರ್ಬಲಗೊಂಡ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 21 ಪೈಸೆ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಶೇರುಪೇಟೆಗಳ ದುರ್ಬಲ ವಹಿವಾಟು ರಾಷ್ಟ್ರಾಧ್ಯಕ್ಷರ ರಜಾದಿನದ ಹಿನ್ನೆಲೆಯಲ್ಲಿ ಶೇರುಪೇಟೆ ಮುಚ್ಚಿದ್ದರಿಂದ ದೇಶಿಯ ಕರೆನ್ಸಿಯ ಮೇಲೆ ಭಾರಿ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 48.82/83ರೂ.ಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ಗೆ 21 ಪೈಸೆ ಕುಸಿತ ಕಂಡಿದ್ದರಿಂದ 49.03 ರೂ.ಗಳಿಗೆ ತಲುಪಿದೆ
ಏಷ್ಯಾ ಮಾರುಕಟ್ಟೆಗಳ ವಹಿವಾಟು ಕುಸಿತಗೊಂಡಿದ್ದರಿಂದ ದೇಶಿಯ ಶೇರುಪೇಟೆ ಕೂಡಾ ನಕಾರಾತ್ಮಕ ಕ್ಷೇತ್ರದತ್ತ ವಾಲುವ ಸಾಧ್ಯತೆಗಳಿರುವುದರಿಂದ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಆತಂಕ ಹೂಡಿಕೆದಾರರನ್ನು ಕಾಡುತ್ತಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ದೇಶಗಳ ಕರೆನ್ಸಿಯ ಎದುರು ಡಾಲರ್ ಪ್ರಬಲವಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕಶೇ.3.01 ರಷ್ಟು, ಜಪಾನ್‌ನ ನಿಕೈ ಶೇ.1.5 ರಷ್ಟು ಶೇರುಪೇಟೆಯಲ್ಲಿ ಕುಸಿತ ಕಂಡಿವೆ. |