ಜಾಗತಿಕ ಆರ್ಥಿಕ ಕುಸಿತ ಆಳವಾಗುತ್ತಿರುವುದರಿಂದ ಕಚ್ಚಾ ತೈಲದ ಬೇಡಿಕೆ ಕುಸಿತವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 37 ಡಾಲರ್‌ಗಳಿಗೆ ತಲುಪಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ವಿತರಣೆ ಅವಧಿಯಲ್ಲಿ ಸಾದಾ ಕಚ್ಚಾ ತೈಲ ದರ 76 ಸೆಂಟ್ಸ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 36.75 ಡಾಲರ್‌ಗಳಿಗೆ ತಲುಪಿದೆ.ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಪ್ರತಿ ಬ್ಯಾರೆಲ್‌ಗೆ 11 ಸೆಂಟ್ಸ್‌ಗಳ ಏರಿಕೆಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳಿಗೆ ಏರಿಕೆಯಾಗಿದ್ದುಪ್ರಸ್ತುತ ಶೇ.75ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 37 ಡಾಲರ್‌ಗಳಿಗೆ ತಲುಪಿದೆ. ಜಗತ್ತಿನ ಅತಿ ಹೆಚ್ಚು ಇಂಧನ ವ್ಯಯಿಸುವ ದೇಶವಾದ ಅಮೆರಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೇಡಿಕೆ ಇಳಿಮುಖವಾಗಿದ್ದರಿಂದ ದರಗಳು ಕುಸಿದಿವೆ ಎಂದು ತೈಲ ಮಾರುಕಟ್ಟೆ ಮೂಲಗಳು ತಿಳಿಸಿವೆ. ಜಗತ್ತಿನ ಎರಡನೇ ಬೃಹತ್ ಆರ್ಥಿಕ ಶಕ್ತಿಯಾದ ಜಪಾನ್ ದೇಶ ಕೂಡಾ ಶೇ.3.3 ರಷ್ಟು ಆರ್ಥಿಕ ಕೊರತೆ ಎದುರಾಗಿದೆಎಂದು ಪ್ರಕಟಿಸಿದ್ದು, 1974 ರ ನಂತರ ಪ್ರಥಮ ಬಾರಿಗೆ ಹೀನಾಯ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. |