ಜಾಗತಿಕ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಹೂಡಿಕೆದಾರರು ಸುರಕ್ಷಿತ ಪರ್ಯಾಯ ಹೂಡಿಕೆಯಾದ ಚಿನ್ನ ಖರೀದಿಯಲ್ಲಿ ತೊಡಗಿದ್ದರಿಂದ,ನವದೆಹಲಿಯ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 15,200 ರೂಪಾಯಿಗಳಿಗೆ ತಲುಪಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಏರಿಕೆಯಾದ ಹಿನ್ನೆಲೆಯಲ್ಲಿ 10 ಗ್ರಾಂ ಚಿನ್ನದ ದರ 360 ರೂಪಾಯಿಗಳ ಏರಿಕೆ ಕಂಡು 15,200 ರೂಪಾಯಿಗಳಿಗೆ ತಲುಪಿತು. ಮುಂಬರುವ ಅಗಸ್ಟ್ ತಿಂಗಳ ಗುತ್ತಿಗೆ ಚಿನ್ನದ ಪೂರೈಕೆ ದರದಲ್ಲಿ ಶೇ.2.31 ರಷ್ಟು ಏರಿಕೆಯಾಗಿ 15,050 ರೂ.ಗಳಿಗೆ ತಲುಪಲಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ. ಏಷ್ಯಾ ಮಾರುಕಟ್ಟೆಗಳಲ್ಲಿ ಚಿನ್ನದ ದರ ಶೇ.1.55ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 956.20 ಡಾಲರ್‌ಗಳಾಗಲಿದ್ದು, ಜಾಗತಿಕ ಆರ್ಥಿಕ ಕುಸಿತ ಹಾಗೂ ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಚಿನ್ನದ ದರ ಕಳೆದ ಏಳು ತಿಂಗಳಲ್ಲಿ ಅತಿ ಹೆಚ್ಚಿನ ಏರಿಕೆಯನ್ನು ಕಂಡಿದೆ. |