ಹಣದುಬ್ಬರ ಶೇ4.39ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರಗಳನ್ನು ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆಗಳಿವೆ ಎಂದು ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಅಧ್ಯಕ್ಷ ಪಾರೇಕ್ ತಿಳಿಸಿದ್ದಾರೆ.
ಬಾರತೀಯ ರಿಸರ್ವ್ ಬ್ಯಾಂಕ್ ಶ್ರೀಘ್ರದಲ್ಲಿ ಬಡ್ಡಿ ದರ ಕಡಿತದ ಆದೇಶ ಹೊರಡಿಸದಿದ್ದರೂ ಮುಂಬರುವ ಕೆಲ ವಾರಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಜದೀಪಕ್ ಪಾರೇಕ್ ತಿಳಿಸಿದ್ದಾರೆ.
ದೇಶದ ಹಣದುಬ್ಬರ ದರ ಇಳಿಕೆಯಾಗುತ್ತಿರುವದು ಸ್ವಾಗತಾರ್ಹ. ಹಣದುಬ್ಬರ ಇಳಿಕೆಯಾದಲ್ಲಿ ಬಡ್ಡಿ ದರಗಳು ಕೂಡಾ ಇಳಿಕೆಯಾಗಲು ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಶೇ.13ರಷ್ಟಿದ್ದ ಹಣದುಬ್ಬರ ದರ ಜನೆವರಿ ಅಂತ್ಯಕ್ಕೆ ಶೇ.4.39 ರಷ್ಟು ಇಳಿಕೆಯಾಗಿರುವುದು ವಹಿವಾಟುದಾರರಲ್ಲಿ ಚೇತರಿಕೆ ಮೂಡಿಸಿದೆ ಎಂದು ದೀಪಕ್ ಪಾರೇಕ್ ತಿಳಿಸಿದ್ದಾರೆ.. |