ಪ್ಯಾರಿಸ್ : ಜಾಗತಿಕ ಆರ್ಥಿಕತೆ ಶೀಘ್ರದಲ್ಲಿ ಸುಸ್ಥಿತಿಗೆ ಬರಲಿದೆ ಎನ್ನುವ ಬಗ್ಗೆ ನಾನು ಆಶಾವಾದಿಯಾಗಿಲ್ಲ ಎಂದು ಆಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಮುಖ್ಯಸ್ಥ ಸ್ಟ್ರಾಸ್ ಖಾನ್ ಹೇಳಿದ್ದಾರೆ.
ಜಗತ್ತಿನ ಎಲ್ಲ ರಾಷ್ಟ್ರಗಳ ಉತ್ತೇಜನ ಪ್ಯಾಕೇಜ್ ಘೋಷಿಸಿ ಇತರ ದೇಶಗಳೊಂದಿಗೆ ಪರಸ್ಪರ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ನಾಯಕರು ಅಂತಾರಾಷ್ಟ್ರೀಯ ಸಭೆಗಳಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸುತ್ತಾರೆ.ಆದರೆ ತಮ್ಮ ದೇಶಗಳಲ್ಲಿ ರಾಜಕೀಯ ಒತ್ತಡ ಹೆಚ್ಚಾದ ನಂತರ ನಿಲುವುಗಳನ್ನು ಬದಲಿಸುತ್ತಾರೆ. ತಮ್ಮ ದೇಶದ ಏಳಿಗೆಗಾಗಿ ನೆರೆಯ ರಾಷ್ಟ್ರಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತಾರೆ ಎಂದು ಹೇಳಿದ್ದಾರೆ.
ದೇಶದ ಅನೇಕ ಬ್ಯಾಂಕ್‌ಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಗಿ ಕಾನೂನು ಜಾರಿಗೊಳಿಸುವುದು ಅಗತ್ಯವಾಗಿದೆ.ಮನೆಗೆ ಬೆಂಕಿ ಬಿದ್ದಿರುವುದರಿಂದ ಅಗ್ನಿಶಾಮಕ ದಳದವರಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸ್ಟ್ರಾಸ್ ತಿಳಿಸಿದ್ದಾರೆ. |