ಆಕಾಶಮುಖಿಯಾಗಿರುವ ಚಿನ್ನದ ದರ ಮತ್ತೊಂದು ಮೈಲಿಗಲ್ಲು ದಾಟಿದ್ದು, ಚಿನಿವಾರ ಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 15,582 ರೂಪಾಯಿಗಳಿಗೆ ತಲುಪಿತು.ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಆತಂಕಗೊಂಡ ಹೂಡಿಕೆದಾರರು ಪರ್ಯಾಯ ಸುರಕ್ಷಿತ ಹೂಡಿಕೆಗಾಗಿ ಚಿನ್ನವನ್ನು ಖರೀದಿಸುತ್ತಿರುವದರಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ. ಹೂಡಿಕೆದಾರರರಿಂದ ಚಿನ್ನದ ಖರೀದಿ ಹಾಗೂ ಮದುವೆ ಸಮಾರಂಭಗಳ ಸಮಯವಾಗಿದ್ದರಿಂದ ಚಿನ್ನದ ದರ ಏರಿಕೆಗೆ ಮತ್ತಷ್ಟು ಬೆಂಬಲ ದೊರೆತಂತಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಷ್ಯಾ ಮಾರುಕಟ್ಟೆಗಳಲ್ಲಿ ಆರ್ಥಿಕ ಬಿಕ್ಕಟ್ಟು ಆಳವಾಗುತ್ತಿರುವುದರಿಂದ ಚಿನ್ನ ಖರೀದಿ ಸೂಕ್ತ ಎಂದು ಹೂಡಿಕೆದಾರರ ಆಸಕ್ತಿಯಿಂದಾಗಿ ಪ್ರತಿ ಔನ್ಸ್‌ಗೆ 9.50 ಡಾಲರ್ ಏರಿಕೆಯಾಗಿ 969 ಡಾಲರ್‌ಗಳಿಗೆ ತಲುಪಿದೆ. |