ದೇಶದ ಎರಡನೇ ಪ್ರಮುಖ ಕಾರು ತಯಾರಿಕೆ ಕಂಪೆನಿ ಹುಂಡೈ, ಇಂಜಿನೀಯರಿಂಗ್ ಎಕ್ಸ್‌ಪೋರ್ಟ್ ಪ್ರೋಮೇಷನ್ ಕೌನ್ಸಿಲ್‌ನಿಂದ 2006-07 ರ ಸಾಲಿನ ಟಾಪ್ ಎಕ್ಸ್‌ಪೋರ್ಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಪಾತ್ರವಾಗಿದೆ. 2006-07 ರ ಸಾಲಿನಲ್ಲಿ ಯಂತ್ರಗಳ ರಫ್ತಿನಲ್ಲಿ ಗಣನೀಯ ಸಾಧನೆಯನ್ನು ಪರಿಗಣಿಸಿ ಹುಂಡೈ ಕಂಪೆನಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕೇರಳದ ಕೈಗಾರಿಕೆ ಸಚಿವ ಎಲ್‌ಮಾರಮ್ ಕರೀಂ, ತಿರುವನಂತಪುರಂನಲ್ಲಿ ಆಯೋಜಿಸಲಾದ ದಕ್ಷಿಣ ಪ್ರಾಂತೀಯ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಹುಂಡೈ ಮೋಟಾರ್ ಇಂಡಿಯಾದ ಪ್ರಾಂತೀಯ ವ್ಯವಸ್ಥಾಪಕ ಕಿಮ್ ಅವರಿಗೆ 2006-07ರ ಸಾಲಿನ ಟಾಪ್ ಎಕ್ಸ್‌ಪೋರ್ಟರ್ ಆಫ್ ದಿ ಇಯರ್ ಗೋಲ್ಡನ್ ಟ್ರೂಫಿ ನೀಡಿ ಗೌರವಿಸಿದರು. ನನಗೆ ಹುಂಡೈ ಕಂಪೆನಿಯ ರಫ್ತು ಸಾಧನೆಯನ್ನು ಪರಿಗಣಿಸಿ ಕೈಗಾರಿಕೋದ್ಯಮ ಸಚಿವಾಲಯ ನೀಡಿರುವ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಗೌರವ ತಂದಿದೆ ಎಂದು ಕಿಮ್ ಹೇಳಿದ್ದಾರೆ. |