ನವದೆಹಲಿ : ಸತ್ಯಂ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಸತ್ಯಂ ಸಂಸ್ಥಾಪಕ ಬಿರಾಮಾಲಿಂಗಾರಾಜು ಪುತ್ರ ಸಂಚಾಲಿತ ಮೇತಾಸ್ ಇನ್‌ಫ್ರಾ ಮತ್ತು ಮೇತಾಸ್ ಪ್ರಾಪರ್ಟಿಸ್ ಅಡಳಿತ ಮಂಡಳಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ.
ಮೇತಾಸ್ ಇನ್‌ಫ್ರಾ ಮತ್ತು ಮೇತಾಸ್ ಪ್ರಾಪರ್ಟಿಸ್ ಕಂಪೆನಿಗಳು ಮತ್ತಷ್ಟು ವಂಚನೆ ಎಸಗುವುದುನ್ನು ತಡೆಯಲು ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಮೇತಾಸ್ ಕಂಪೆನಿಗಳ ಅಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಸರಕಾರ ಆದೇಶಿಸಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್ ಚಂದ್ ಗುಪ್ತಾ ಹೇಳಿದ್ದಾರೆ.
ಮೇತಾಸ್ ಅಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ವ್ಯಕ್ತಿಗಳನ್ನು ಮತ್ತೊಂದು ಕಂಪೆನಿಗಳಲ್ಲಿ ನಿರ್ದೇಶಕರಾಗಲು ಆಸ್ಪದ ನೀಡದಂತೆ ಮನವಿ ಮಾಡಲಾಗಿದೆ ಎಂದು ಸಚಿವ ಗುಪ್ತಾ ತಿಳಿಸಿದ್ದಾರೆ.
ಮೇತಾಸ್ ಅಡಳಿತ ಮಂಡಳಿಗಳ ನಿರ್ದೇಶಕರು ತಮ್ಮ ಆಸ್ತಿಯನ್ನು ಇತರರಿಗೆ ಹಸ್ತಾಂತರಿಸದಂತೆ ಕೂಡಾ ಸರಕಾರ ಆದೇಶ ನೀಡಿದೆ ಎಂದು ಸಚಿವರು ಹೇಳಿದ್ದಾರೆ.
ಸತ್ಯಂ ವಂಚನೆ ಹಗರಣ ಫೆಬ್ರವರಿ 24 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು, ಮೇತಾಸ್ ಅಡಳಿತ ಮಂಡಳಿಗಳಿಗೆ ಸರಕಾರಿ ನಿರ್ದೇಶಕರನ್ನು ನೇಮಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು,ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಸಚಿವ ಗುಪ್ತಾ ತಿಳಿಸಿದ್ದಾರೆ |