ಬ್ಯಾಂಕ್‌ಗಳು ಹಾಗೂ ರಫ್ತು ವಹಿವಾಟುದಾರರು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ಸತತ ಮೂರು ದಿನಗಳ ಕುಸಿತ ಕಂಡಿದ್ದ ರೂಪಾಯಿ ಡಾಲರ್ ಎದುರಿಗೆ ಆರಂಭಿಕ ವಹಿವಾಟಿನಲ್ಲಿ 6 ಪೈಸೆ ಏರಿಕೆ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ 49.86 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆ ಏರಿಕೆಯಾಗಿ 49.92/93.ರೂ.ಗಳಿಗೆ ತಲುಪಿದೆ.
ಬುಧವಾರದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ 22 ಪೈಸೆ ಕುಸಿತ ಕಂಡು ಡಾಲರ್‌ಗೆ 49.92/93 ರೂ.ಗಳಿಗೆ ಮುಕ್ತಾಯವಾಗಿತ್ತು.
ಏಷ್ಯಾ ಶೇರುಮಾರುಕಟ್ಟೆಗಳಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿರುವುದರಿಂದ ಬ್ಯಾಂಕ್‌ಗಳು ಹಾಗೂ ರಫ್ತು ವಹಿವಾಟುದಾರರು ಡಾಲರ್ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಹೇಳಿಕೆ ನೀಡಿದ್ದಾರೆ.
ಜಪಾನ್‌ನ ನಿಕೈ ಶೇ.0.87ರಷ್ಟು ಮತ್ತು ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.47 ರಷ್ಟು ಇಳಿಕೆ ಕಂಡಿದೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ. |