ಜಾಗತಿಕ ದುರ್ಬಲ ಆರ್ಥಿಕತೆ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 35 ಡಾಲರ್‌ಗಳಿಂಗತ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್ ಶೇರುಪೇಟೆಯ ಮಾರ್ಚ್ ತಿಂಗಳ ಕಚ್ಚಾ ತೈಲ ವಿತರಣೆಯಲ್ಲಿ 3 ಸೆಂಟ್ಸ್‌ಗಳ ಏರಿಕೆಯಾಗಿ 34.65 ಡಾಲರ್‌ಗಳಿಗೆ ತಲುಪಿದೆ ಎಂದು ತೈಲ ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಆರ್ಥಿಕತೆಯಲ್ಲಿ ಕಚ್ಚಾ ತೈಲ ದರಗಳು ಬಹು ಪ್ರಾಮುಖ್ಯತೆಯನ್ನು ವಹಿಸುತ್ತದೆ ಎಂದು ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಬ್ಯಾಂಕ್‌ನ ತಜ್ಞರಾದ ಡೇವಿಡ್ ಮೋರ್ ಹೇಳಿದ್ದಾರೆ. ಶೇರುಪೇಟೆಗಳ ಕುಸಿತ ಹಿನ್ನೆಲೆಯಲ್ಲಿ ತೈಲ ದರಗಳು ಮಂಗಳವಾರದಂದು ಎರಡು ಡಾಲರ್‌ಗಳಿಗೂ ಹೆಚ್ಚಿನ ಇಳಿಕೆ ಕಂಡಿವೆ. ಅಮೆರಿಕದ ಪ್ರಖ್ಯಾತ ಎರಡು ವಾಹನೋದ್ಯಮ ಕಂಪೆನಿಗಳು ಬೇಲೌಟ್ ಪ್ಯಾಕೇಜ್ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ. ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್ ತಲುಪಿದ್ದ ಕಚ್ಚಾ ತೈಲ ದರ ಬೇಡಿಕೆ ಕುಸಿತದಿಂದಾಗಿ ಪ್ರಸಕ್ತ 34 ಡಾಲರ್‌ಗಳಿಗೆ ತಲುಪಿದೆ. |