ಪ್ರತಿ ತಿಂಗಳು 10 ಮಿಲಿಯನ್ ಮೊಬೈಲ್ ಗ್ರಾಹಕರ ಸೇರ್ಪಡೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಚೀನಾ ಮಾರುಕಟ್ಟೆಗೆ ಸಮಾನವಾದ ವಹಿವಾಟನ್ನು ಭಾರತ ಹೊಂದಿದೆ ಎಂದು ಎರಿಕ್ಸನ್ ಕಂಪೆನಿಯ ಮೂಲಗಳು ತಿಳಿಸಿವೆ. ಉತ್ತರ ಅಮೆರಿಕ ಹಾಗೂ ಚೀನಾ ದೇಶಗಳಂತೆ ಭಾರತದಲ್ಲಿ ಕಂಪೆನಿಗೆ ಶೇ.8 ರಷ್ಟು ನಿವ್ವಳ ಆದಾಯವಿದೆ ಎಂದು ಎರಿಕ್ಸನ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆನ್ರಿಕ್ ಸ್ವಾನ್‌ಬರ್ಗ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಜಗತ್ತಿನಲ್ಲಿ ಮೊಬೈಲ್ ತಯಾರಿಕೆಯಲ್ಲಿ ಮೊದಲನೇ ಸ್ಥಾನಪಡೆದಿರುವ ನೊಕಿಯಾ, ಎರಡನೇ ಸ್ಥಾನದಲ್ಲಿದ್ದ ಅಮೆರಿಕವನ್ನು ಹಿಂದಕ್ಕೆ ತಳ್ಳಿ ಭಾರತ, ಚೀನಾದ ನಂತರ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಕಳೆದ ವರ್ಷ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿತ್ತು. ಸ್ವೀಡನ್ ಮೂಲದ ಟೆಲಿಕಾಂ ಸಂಸ್ಥೆ ಎರಿಕ್ಸನ್,ರಾಜಸ್ಥಾನದಲ್ಲಿ ಉತ್ಪಾದಕ ಘಟಕವನ್ನು ಹೊಂದಿದ್ದು,ಜಾಗತಿಕ ಆರ್ಥಿಕ ಕುಸಿತದಿಂದಾಗಿ ಅಲ್ಪಮಟ್ಟಿಗೆ ಪರಿಣಾಮ ಬೀರಿದೆ ಎಂದು ಸ್ವಾನ್‌ಬರ್ಗ್ ಹೇಳಿದ್ದಾರೆ. |