ಹಣದುಬ್ಬರ ದರ, ಫೆಬ್ರವರಿ 7ಕ್ಕೆ ಅಂತ್ಯಗೊಂಡಂತೆ ಕಳೆದ 14 ತಿಂಗಳುಗಳಲ್ಲಿ ಮೊದಲ ಬಾರಿಗೆ ಶೇ4ಕ್ಕಿಂತ ಇಳಿಮುಖವಾಗಿ ಶೇ.3.92ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವಾರದಲ್ಲಿ ಶೇ.4.39 ರಷ್ಟಿದ್ದ ಹಣದುಬ್ಬರ ದರ ಪ್ರಸಕ್ತ ವಾರದಲ್ಲಿ ಶೇ.0.47 ರಷ್ಟು ಇಳಿಕೆ ಕಂಡು ಶೇ.3.92ಕ್ಕೆ ತಲುಪಿದೆ .ಆರ್ಥಿಕ ತಜ್ಞರು ಪ್ರಸಕ್ತ ವರ್ಷಾಂತ್ಯಕ್ಕೆಹಣದುಬ್ಬರ ದರ ಶೇ.2ಕ್ಕೆ ತಲುಪುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಣದುಬ್ಬರ ಇಳಿಕೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ಉತ್ಪಾದಕ ವಸ್ತುಗಳ ದರಗಳು ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ದರ ಇಳಿಕೆ ಕಂಡಿವೆ. ಅಹಾರ ಮತ್ತು ಇಂಧನ ದರಗಳಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹಣದುಬ್ಬರ ದರ ಶೇ.2ಕ್ಕೆ ತಲುಪಿದಲ್ಲಿ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಐಸಿಐಸಿಐ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಕಾಮತ್ ತಿಳಿಸಿದ್ದಾರೆ.
ಹಣದುಬ್ಬರ ದರ ಇಳಿಕೆಯಾದಲ್ಲಿ ಬಡ್ಡಿ ದರ ಕಡಿತಗೊಳಿಸಲು ಅವಕಾಶಗಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ. |