ಸಂವಿಧಾನಿಕ ನಿರ್ಭಂಧಗಳಿಂದಾಗಿ 2009-10ರ ಮಧ್ಯಂತರ ಬಜೆಟ್‌ನಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವಂತಹ ರಿಯಾಯತಿಗಳನ್ನು ಘೋಷಿಸಲು ಸಾಧ್ಯವಾಗಿಲ್ಲ. ಆದರೆ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಅಗತ್ಯವಾದಲ್ಲಿ ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಲು ಸರಕಾರ ಬದ್ಧವಾಗಿದೆ ಎಂದು ವಿತ್ತ ಸಚಿವ ಮುಖರ್ಜಿ ಹೇಳಿದ್ದಾರೆ.
ರಾಜ್ಯ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವ ಮುಖರ್ಜಿ, ಸಂವಿಧಾನಿಕ ನಿರ್ಭಂಧದಿಂದಾಗಿ ಮಧ್ಯಂತರ ಬಜೆಟ್‌ನಲ್ಲಿ ಸುಧಾರಣಾ ನೀತಿಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಸಚಿವ ಮುಖರ್ಜಿ ಹೇಳಿದ್ದಾರೆ.
ಸರಕಾರದ ಅವಧಿ ಮುಕ್ತಾಯವಾಗುವ ಹಂತಕ್ಕೆ ಬಂದಿರುವುದರಿಂದಲೋಕಸಭಾ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬರುವ ನೂತನ ಸರಕಾರ ಬಜೆಟ್‌ನಲ್ಲಿ ರಿಯಾಯತಿಗಳನ್ನು ಘೋಷಿಸಲಿವೆ ಎಂದು ತಿಳಿಸಿದ್ದಾರೆ. |