ಸಿಎಲ್‌ಬಿ (ಕಂಪೆನಿ ಲಾ ಬೋರ್ಡ್) ಆದೇಶದ ಅಧ್ಯಯನದ ನಂತರ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಖರೀದಿ ಕುರಿತಂತೆ ತೀರ್ಮಾನಿಸಲಾಗುವುದು ಎಂದು ಲಾರ್ಸನ್ ಆಂಡ್ ಟೌಬ್ರೋ ಹೇಳಿಕೆ ನೀಡಿದೆ.
ಸಿಎಲ್‌ಬಿ ಆದೇಶ ನಿನ್ನೆ ರಾತ್ರಿ ನಮಗೆ ತಲುಪಿದ್ದು, ಇಂದು ರಾತ್ರಿಯವರೆಗೆ ಅಧ್ಯಯನ ನಡೆಸಿ ಮುಂದಿನ ಒಂದೆರಡು ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲಾರ್ಸನ್ ಆಂಡ್ ಟೌಬ್ರೋ ಮುಖ್ಯಸ್ಥ ಎ.ಎಂ. ನಾಯಕ್ ತಿಳಿಸಿದ್ದಾರೆ.
ಸತ್ಯಂ ಶೇರುಗಳ ಮುಖಬೆಲೆಯ ದರಗಳನ್ನು ಹೆಚ್ಚಿಸುವಂತೆ ಕೋರಿ ಸತ್ಯಂ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ನಂತರ ಕಂಪೆನಿ ಲಾ ಬೋರ್ಡ್ ಸಾರ್ವಜನಿಕವಾಗಿ ಹರಾಜು ಟೆಂಡರ್ ಕರೆಯಲು ನಿರ್ಧರಿಸಿದೆ.
ಸತ್ಯಂ ಶೇರುಬಂಡವಾಳವನ್ನು 160 ಕೋಟಿ ರೂ.ಗಳಿಂದ 280 ಕೋಟಿ ರೂ.ಗಳಿಗೆ ಏರಿಕೆ ಮಾಡುವ ಅಧಿಕಾರವನ್ನು ಕಂಪೆನಿ ಲಾ ಬೋರ್ಡ್ ಹೊಂದಿದೆ ಎಂದು ಮೂಲಗಳು ತಿಳಿಸಿವೆ. |