ದೇಶಿಯ ಶೇರುಪೇಟೆ ಕುಸಿತದಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಬೇಡಿಕೆಯಲ್ಲಿ ಏರಿಕೆಯಾಗಿ ರೂಪಾಯಿ ಮೌಲ್ಯದಲ್ಲಿ 19 ಪೈಸೆ ಕುಸಿತವಾಗಿದೆ.
ವಿದೇಶಿ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ 49.80 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 19 ಪೈಸೆ ಕುಸಿತವಾಗುವುದರೊಂದಿಗೆ 49.61/63 ರೂ.ಗಳಿಗೆ ತಲುಪಿದೆ.
ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 31 ಪೈಸೆ ಏರಿಕೆ ಕಂಡಿತ್ತು.
ದೇಶಿಯ ಶೇರುಪೇಟೆ ಕುಸಿತದಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಬೇಡಿಕೆಯಲ್ಲಿ ಏರಿಕೆಯಾಗಿ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ.ಏಷ್ಯಾ ಮಾರುಕಟ್ಟೆಗೆಳ ದುರ್ಬಲ ವಹಿವಾಟಿನಿಂದಾಗಿ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ ಎಂದು ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಶೇ.2.41 ರಷ್ಟು ಕುಸಿತ ಕಂಡಿದ್ದು, ಜಪಾನ್‌ನ ನಿಕೈ ಶೇರುಪೇಟೆ ಶೇ.1.87 ರಷ್ಟು ಇಳಿಕೆಯಾಗಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ. |