ಬೆರ್ನ್ : ಸ್ವಿಜರ್ಲೆಂಡ್‌ನ ಬ್ಯಾಂಕ್ ಖಾತೆಗಳನ್ನು ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿರುವುದು ಬೇನಾಮಿ ಖಾತೆಗಳನ್ನು ಹೊಂದಿದ್ದವರಿಗೆ ನಡುಕ ಉಂಟಾಗಿದೆ.
ಸ್ವಿಜರ್ಲೆಂಡ್‌ನ ಅತಿ ದೊಡ್ಡ ಬ್ಯಾಂಕ್ ಯುಬಿಎಸ್ ಬ್ಯಾಂಕ್ ಅಮೆರಿಕದ ಹಲವು ಉದ್ಯಮಿಗಳು ತಮ್ಮಲ್ಲಿಟ್ಟಿರುವ ಖ್ಯಾತ ಉದ್ಯಮಿಗಳು ಹೆಸರುಗಳನ್ನು ಘೋಷಿಸುವುದಾಗಿ ಪ್ರಕಟಿಸಿದೆ .
ಅಮೆರಿಕದ ಕೆಲ ಉದ್ಯಮಿಗಳು ರಾಜಕಾರಣಿಗಳು ಸರಕಾರಕ್ಕೆ ತೆರಿಗೆಯನ್ನು ವಂಚಿಸಲು ಲಕ್ಷಾಂತರ ಕೋಟಿ ರೂ.ಗಳನ್ನು ಬ್ಯಾಂಕ್‌ನಲ್ಲಿಟ್ಟಿರುವುದರಿಂದ ಅಮೆರಿಕ ಸರಕಾರದ ಒತ್ತಡಕ್ಕೆ ಮಣಿದು ಹೆಸರುಗಳನ್ನು ಬಹಿರಂಗಪಡಿಸಲು ಸಮ್ಮತಿಸಿದೆ.
ಅಮೆರಿಕ ಸರಕಾರ ಹಾಗೂ ಯುಬಿಎಸ್ ಬ್ಯಾಂಕ್ ಅಡಳಿತ ಮಂಡಳಿಯೊಂದಿಗೆ ನಡೆದ ಮಾತುಕತೆ ಸಫಲವಾಗಿದ್ದು, 4 ಸಾವಿರ ಕೋಟಿ ರೂಪಾಯಿ ದಂಡ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸಲು ನಿರ್ಧರಿಸಿದೆ. |