ಸತ್ಯಂ ಕಂಪ್ಯೂಟರ್ ಸರ್ವಿಸಸ್ ಸಂಸ್ಥಾಪಕ ಬಿ.ರಾಮಲಿಂಗಾರಾಜು ಎಸಗಿದ 7800 ಕೋಟಿ ರೂ.ಹಗರಣದಿಂದ ಧಕ್ಕೆ ಉಂಟಾದ ಕಂಪೆನಿಗಳಿಗೆ ಹಾಗೂ ಹೂಡಿಕೆದಾರರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸರಕಾರ ತಳ್ಳಿಹಾಕಿದೆ.
ಸತ್ಯಂ ವಂಚಿತ ಕಂಪೆನಿಗಳಿಗೆ ಹಾಗೂ ಹೂಡಿಕೆದಾರರಿಗೆ ಎದುರಾದ ಆರ್ಥಿಕ ನಷ್ಟವನ್ನು ಭರಿಸುವ ಯೋಜನೆಗಳು ಸರಕಾರದ ಮುಂದಿಲ್ಲ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್ ಚಂದ್ ಗುಪ್ತಾ ಲೋಕಸಭೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸತ್ಯಂ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ರಾಮಲಿಂಗಾರಾಜು ಬ್ಯಾಂಕ್ ಖಾತೆಗಳನ್ನು ತಿದ್ದಿರುವುದಾಗಿ ಒಪ್ಪಿಕೊಂಡ ನಂತರ ಹೂಡಿಕೆದಾರರಿಗೆ ಎದುರಾದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಶೇರುಪೇಟೆ ವಿವಿಧ ಅಂಶಗಳ ಮೇಲೆ ನಿರಂತರ ಏರಿಳಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ. |