ಸತತ ಮೂರನೇ ದಿನಕ್ಕೆ ಚಿನ್ನದ ದರದ ಏರಿಕೆಯ ನಾಗಾಲೋಟ ನಿರಂತರ ಮುಂದುವರಿದಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ ಎನ್ನುವ ಉಹಾಪೋಹಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಖರೀದಿಯಲ್ಲಿ ತೊಡಗಿದ್ದರಿಂದ ಚಿನ್ನದ ದರ ಪ್ರತಿ 10ಗ್ರಾಂಗೆ 15,570 ರೂಪಾಯಿಗಳಿಗೆ ತಲುಪಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಚಿನ್ನದ ದರ ಪ್ರತಿ 10 ಗ್ರಾಂಗೆ 15,490 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ದೀಢಿರನೆ 80 ರೂ.ಗಳ ಏರಿಕೆ ಕಂಡು ಪ್ರತಿ 10ಗ್ರಾಂಗೆ 15,570 ರೂ.ಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಆತಂಕಗೊಂಡ ಹೂಡಿಕೆದಾರರು ಪರ್ಯಾಯ ಸುರಕ್ಷಿತ ಹೂಡಿಕೆಗಾಗಿ ಚಿನ್ನವನ್ನು ಖರೀದಿಸುತ್ತಿರುವದರಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಹೂಡಿಕೆದಾರರರಿಂದ ಚಿನ್ನದ ಖರೀದಿ ಹಾಗೂ ಮದುವೆ ಸಮಾರಂಭಗಳ ಸಮಯವಾಗಿದ್ದರಿಂದ ಚಿನ್ನದ ದರ ಏರಿಕೆಗೆ ಮತ್ತಷ್ಟು ಬೆಂಬಲ ದೊರೆತಂತಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಮಾರುಕಟ್ಟೆಗಳಲ್ಲಿ ಆರ್ಥಿಕ ಬಿಕ್ಕಟ್ಟು ಆಳವಾಗುತ್ತಿರುವುದರಿಂದ ಚಿನ್ನ ಖರೀದಿ ಸೂಕ್ತ ಎಂದು ಹೂಡಿಕೆದಾರರ ಆಸಕ್ತಿಯಿಂದಾಗಿ ಪ್ರತಿ ಔನ್ಸ್‌ಗೆ 9.50 ಡಾಲರ್ ಏರಿಕೆಯಾಗಿ 980.00 ಡಾಲರ್‌ಗಳಿಗೆ ತಲುಪಿದೆ.
ಸ್ಟ್ಯಾಂಡರ್ಡ್ ಚಿನ್ನ 10 ಗ್ರಾಂಗಳಿಗೆ 80 ರೂಪಾಯಿ ಏರಿಕೆಯಾಗಿ 15,570 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿ ಪ್ರತಿ ಕೆ.ಜಿಗೆ 50 ದರ ಇಳಿಕೆಯಾಗಿ 23,090 ರೂ.ಗಳಿಂದ 23,040 ರೂ.ಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ. |