ಗ್ರಾಹಕರ ಬೇಡಿಕೆ ಕುಸಿತದಿಂದ ಬಳಲುತ್ತಿರುವ ವಾಹನೋದ್ಯಮಕ್ಕೆ ಕಾಯಕಲ್ಪ ನೀಡಲು ದೇಶದ ಸಾರ್ವಜನಿಕ ಕ್ಷೇತ್ರದ ನಂಬರ್ ಒನ್ ಬ್ಯಾಂಕ್ ಎಸ್‌ಬಿಐ ಒಂದು ವರ್ಷದ ಅವಧಿಗೆ ಶೇ.10ರ ಬಡ್ಡಿದರದಲ್ಲಿ ಕಾರು ಸಾಲ ನೀಡಲು ನಿರ್ಧರಿಸಿದೆ. ಶೀಥಲಿಕರಣ ಮತ್ತು ವೇರ್‌ಹೌಸ್‌ಗಳಲ್ಲಿ ರೈತರು ಸಂಗ್ರಹಿಸಿದ ಅಹಾರ ಧಾನ್ಯಗಳ ರಸೀದಿಯ ಮೇರೆಗೆ ಶೇ,8 ರ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ನೀಡಲು ತೀರ್ಮಾನಿಸಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 23 ರಿಂದ ಮೇ 31 ರವರೆಗೆ ಸಾಲ ಪಡೆದ ಗ್ರಾಹಕರಿಗೆ ನೂತನ ಬಡ್ಡಿದರಗಳು ಅನ್ವಯವಾಗಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಜಾಗತಿಕ ಆರ್ಥಿಕ ಕುಸಿತ ಹಾಗೂ ಬಿಗಿ ಸಾಲದ ನೀತಿ ನಡುವೆ ದೇಶದ ವಾಹನೋದ್ಯಮ ಕ್ಷೇತ್ರದಲ್ಲಿ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಶೇ.3.2ರಷ್ಟು ಕುಸಿತ ಕಂಡಿದೆ. |