ದೇಶದ ವಿದೇಶಿ ವಿನಿಮಯ ಫೆಬ್ರವರಿ 20ಕ್ಕೆ ಅಂತ್ಯಗೊಂಡಂತೆ 249.692 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, 1.840 ಬಿಲಿಯನ್ ಡಾಲರ್ ಕುಸಿತವಾಗಿದೆ. ಕಳೆದ ವರ್ಷ ಪ್ರಸಕ್ತ ಸಮಯದಲ್ಲಿ 251.532 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ಫಾರೆಕ್ಸ್ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಸಂಗ್ರಹ 1.839 ಬಿಲಿಯನ್ ಡಾಲರ್‌ಗಳಷ್ಟು ಕುಸಿತ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಾರದ ವರದಿಯ ಮೂಲಗಳು ತಿಳಿಸಿವೆ.
ಭಾರತ ಚಿನ್ನದ ಸಂಗ್ರಹ ಫೆಬ್ರವರಿ 20ಕ್ಕೆ ಅಂತ್ಯಗೊಂಡಂತೆ ಯಾವುದೇ ಬದಲಾವಣೆಗಳು ಕಾಣದೇ 8.884 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಐಎಂಎಫ್‌ನಲ್ಲಿ ದೇಶದ ಮೀಸಲು ಸಂಗ್ರಹ ಕಳೆದ ವರ್ಷವಿದ್ದ 829 ಮಿಲಿಯನ್ ಡಾಲರ್‌ಗಳಿಂದ 830 ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ. |