ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7 ರ ಗಡಿ ತಲುಪಲಿದೆ ಎಂದು ಪ್ರದಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯರಾದ ಸುಮಿತ್ರಾ ಚೌಧರಿ ಹೇಳಿದ್ದಾರೆ.
ಅನಿಶ್ಚಿತತೆಯ ಸಂದರ್ಭದಲ್ಲಿ ಮಾರ್ಗದರ್ಶನ ಕುರಿತ ವಿಚಾರ ಸಂಕೀರ್ಣದ ವಾರ್ಷಕ ಸಮಾರಂಭದಲ್ಲಿ ಮಾತನಾಡಿದ ಚೌಧರಿ, ಖಾಸಗಿ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.
ದೇಶಧ ವಿದ್ಯುತ ಉತ್ಪಾದನೆಯ ಕುರಿತಂತೆ ಮಾತನಾಡಿ, ದೇಶದಲ್ಲಿ ಕಳೆದ ವರ್ಷ 7200 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 8 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಈಗಾಗಲೇ 4 ಸಾವಿರ ಮೆ.ವ್ಯಾಟ್ ವಿದ್ಯುತ್ ಉಪ್ತಾದಿಸಲಾಗಿದೆ ಎಂದು ಸುಮಿತ್ರಾ ಚೌಧರಿ ತಿಳಿಸಿದ್ದಾರೆ. |