ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಗತ್ತಿನ ಅತಿ ಕಡಿಮೆ ದರದ ನ್ಯಾನೊ ಕಾರುಗಳ ಏಕೈಕ ಬುಕ್ಕಿಂಗ್ ಏಜೆಂಟ್ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾನೊ ಕಾರು ಬುಕ್ಕಿಂಗ್‌ಗಾಗಿ ಎಸ್‌ಬಿಐ ಏಕೈಕ ಬ್ಯಾಂಕ್‌ನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ (ಬಂಗಾಳ ವೃತ್ತ) ಜೆ.ಕೆ.ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ ನ್ಯಾನೊ ಬುಕ್ಕಿಂಗ್ ವಿವರಗಳ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ ಅವರು ಮುಂಬರುವ 15 ದಿನಗಳಲ್ಲಿ ಸಂಪೂರ್ಣ ವಿವರಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ನ್ಯಾನೊ ಬುಕ್ಕಿಂಗ್ ಕುರಿತಂತೆ ವಿವರಗಳಿಗಾಗಿ ಟಾಟಾ ಮೋಟಾರ್ಸ್ ವಕ್ತಾರರನ್ನು ಸಂಪರ್ಕಿಸಿದಾಗ, ಸಧ್ಯಕ್ಕೆ ಯಾವುದೇ ವಿವರಗಳು ಲಭ್ಯವಿಲ್ಲ ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಅಟೋ ಎಕ್ಸಫೋ ಪ್ರದರ್ಶನದಲ್ಲಿ ನ್ಯಾನೊ ಮಾಡೆಲ್ ಪ್ರದರ್ಶನದ ನಂತರ ಕೇವಲ ಒಂದು ಲಕ್ಷ ರೂಪಾಯಿಯಲ್ಲಿ ಕಾರು ಖರೀದಿಸುವ ಬಗ್ಗೆ ಮಧ್ಯಮ ವರ್ಗದ ಜನತೆಯಲ್ಲಿ ಹೊಸ ಆಕರ್ಷಣೆಯನ್ನು ಉಂಟು ಮಾಡಿದೆ. |