ವಿಪ್ರೋ ಟೆಕ್ನಾಲಾಜೀಸ್ ಸಂಸ್ಥೆ 8 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲು ಸಿದ್ದತೆ ನಡೆಸಿದ್ದು, ಮುಂಬರುವ ಜೂನ್-ಜುಲೈ ತಿಂಗಳಲ್ಲಿ ಕಂಪೆನಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಜೂನ್-ಜುಲೈ ತಿಂಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿ ವಿಶ್ವವಿದ್ಯಾಲಯಗಳಿಂದ ಹೊರಬರಲಿದ್ದಾರೆ. ನಮಗೆ ಅಗತ್ಯವಾದ ಸಂದರ್ಭದಲ್ಲಿ ಅವರನ್ನು ಕರೆಸಿಕೊಳ್ಳಲಾಗುವುದು. ಅಗತ್ಯವಾಗದಿದ್ದಲ್ಲಿ ಮುಂದಿನ ವರ್ಷದಲ್ಲಿ ಕಂಪೆನಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ವಿಪ್ರೋ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಪ್ರತೀಕ್ ಕುಮಾರ್ ತಿಳಿಸಿದ್ದಾರೆ.
ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವ ಉದ್ಯೋಗಿಗಳಿಗೆ ಕಂಪೆನಿಗೆ ಸೇರ್ಪಡೆಯಾಗುವ ಕುರಿತಂತೆ ಸೂಚನೆಗಳನ್ನು ನೀಡಿದ್ದು, ಅದರಂತೆ ಅಭ್ಯರ್ಥಿಗಳು ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಪ್ರತೀಕ್ ಕುಮಾರ್ ತಿಳಿಸಿದ್ದಾರೆ. |