ನವದೆಹಲಿ : ಪ್ರಸ್ತುತ ಎದುರಾಗಿರುವ ಜಾಗತಿಕ ಆರ್ಥಿಕ ಕುಸಿತ ನಮ್ಮ ಜೀವನದಲ್ಲಿ ಎಂದು ಎದುರಿಸದ ಕಷ್ಟದ ದಿನಗಳಾಗಿವೆ. ಕಂಪೆನಿಗಳು ಆರ್ಥಿಕತೆಯನ್ನು ಬಲಿಷ್ಟಗೊಳಿಸಲು ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.ಅದರಲ್ಲಿ ವಿಫಲವಾದ ಕಂಪೆನಿಗಳು ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಖ್ಯಾತ ಉದ್ಯಮಿ ರತನ್ ಟಾಟಾ ಅಭಿಪ್ರಾಯಪಟ್ಟರು.
ಆರ್ಥಿಕ ಕುಸಿತದ ಕುರಿತಂತೆ ಮಾತನಾಡಿದ ಟಾಟಾ, ಕಠಿಣ ನೀತಿಗಳನ್ನು ಅಳವಡಿಸಿಕೊಂಡು ಸ್ಪೂರ್ತಿಯಿಂಜ ಕಾರ್ಯನಿರ್ವಹಿಸಿದಲ್ಲಿ ಕಷ್ಟದ ಸಂದರ್ಭದಲ್ಲಿ ಕೂಡಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದು ಟಾಟಾ ನುಡಿದರು.
ಜಾಗತಿಕ ಆರ್ಥಿಕ ಬಿಕ್ಕಟ್ಟು ಶಾಶ್ವತವಲ್ಲ. ಅಲ್ಪ ಅವಧಿಯವರೆಗೆ ಮಾತ್ರ ವ್ಯತಿರಿಕ್ತ ಪರಿಣಾಮಗಳನ್ನು ಕಾಣಬಹುದು. ಬಿಕ್ಕಟ್ಟಿನಲ್ಲಿ ಉತ್ತಮ ಆರ್ಥಿಕತೆಯನ್ನು ಕಂಡುಕೊಂಡಲ್ಲಿ ಅಸ್ತಿತ್ವ ಉಳಿಯುತ್ತದೆ. ವಿಫಲವಾದಲ್ಲಿ ಅಸ್ತಿತ್ವ ನಾಶವಾಗುತ್ತದೆ ಎಂದು ಟಾಟಾ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಟಾ ಗ್ರೂಪ್‌ನಲ್ಲಿರುವ ಕಂಪೆನಿಗಳಿಗೆ ಆರ್ಥಿಕ ಬೆಳವಣಿಗೆಗಳಿಗಾಗಿ ತಮ್ಮದೇ ದಾರಿಯಲ್ಲಿ ಸಾಗುವಂತೆ ಆದೇಶ ನೀಡಿದ್ದೇನೆ ಎಂದು ಟಾಟಾ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ. |