ದೇಶಿಯ ಶೇರುಪೇಟೆ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ, ಹಳೆಯ ದರ ಏರಿಕೆಯ ದಾಖಲೆಗಳನ್ನು ಮುರಿದು ಚಿನ್ನದ ದರ ನಾಗಾಲೋಟದಲ್ಲಿ ಅಂಬರಕ್ಕೇರುತ್ತಿದೆ.ಚಿನಿವಾರ ಪೇಟೆಯ ಶನಿವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 16,349 ರೂಪಾಯಿಗಳಿಗೆ ತಲುಪಿದೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಾಗಿ ಚಿನ್ನ ಖರೀದಿಯಲ್ಲಿ ಆಸಕ್ತಿ ತೋರಿದ್ದರಿಂದ ಕಳೆದ ವಾರದಿಂದ ನಿರಂತರ ಏರಿಕೆಯನ್ನು ಕಾಣುತ್ತಿರುವ ಚಿನ್ನದ ದರ, ಸರ್ವಕಾಲಿಕ ದಾಖಲೆಯಾದ 16,349 ರೂ.ಗಳಿಗೆ ತಲುಪಿದೆ ಅಮೆರಿಕದಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,007.20 ಡಾಲರ್‌ಗಳಿಗೆ ಏರಿಕೆಯಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಜಗತ್ತಿನಾದ್ಯಂತ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಾಗಿ ಚಿನ್ನ ಖರೀದಿಯತ್ತ ಗಮನಹರಿಸಿದ್ದರಿಂದ ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರಾದ ಗಾಲಿಪೆಲ್ಲಿ ಹರೀಶ್ ಹೇಳಿದ್ದಾರೆ. |