ಮುಂಬೈ : ಕೇಂದ್ರ ಸರಕಾರ ಎರಡು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಮುಂಬರುವ ವರ್ಷಧ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7 ರಷ್ಟಾಗಲಿದೆ. ಆದರೆ ಮಧ್ಯಂತರದಲ್ಲಿ ಕೆಲ ಕಷ್ಟಗಳು ಎದುರಾಗಲಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ವರ್ಷದ ಆರ್ಥಿಕ ಸಾಲಿನಲ್ಲಿ ಆರಂಭಿಕ ಆರು ತಿಂಗಳುಗಳ ನಂತರ ಆರ್ಥಿಕತೆ ಸುಸ್ಥಿತಿಗೆ ಬರಲಿದ್ದು, ದೇಶಧ ಜಿಡಿಪಿ ದರ ಶೇ.7 ರ ಗಡಿಯನ್ನು ತಲುಪಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ತಿಳಿಸಿದ್ದಾರೆ.
ಆದರೆ ಮಧ್ಯಂತರ ಸಮಯದಲ್ಲಿ ಉತ್ಪಾದನಾ ಕ್ಷೇತ್ರ. ವಜ್ರ ಆಭರಗಣ ಮತ್ತು ರಫ್ತು ಆಧಾರಿತ ಕ್ಷೇತ್ರಗಳಲ್ಲಿ ಬಿಕ್ಕಟ್ಟು ಎದುರಾಗಲಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕತೆ ಆರಂಭಿಕ ಆರು ತಿಂಗಳುಗಳವರೆಗೆ ನಿಧಾನಗತಿಯನ್ನು ಅನುಸರಿಸಲಿದ್ದು, ಎರಡನೇ ಹಂತಕ್ಕೆ ಸುಸ್ಥಿತಿಗೆ ಬರಲಿದೆ ಎಂದು ಮೊಂಟೆಕ್ ಹೇಳಿದ್ದಾರೆ.
ಕೇಂದ್ರ ಸರಕಾರ ಅಭಿವೃದ್ಧಿಗಾಗಿ ಆರ್ಥಿಕ ನೀತಿಗಳಲ್ಲಿ ಬದಲಾವಣೆ ತಂದಿದ್ದು, ಹಣದುಬ್ಬರ ದೇಶದಲ್ಲಿ ಸಮಸ್ಯೆಯಾಗಿ ಉಳಿದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ. |