ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಬಿಎಸ್ಎನ್ಎಲ್ `ಇಂಡಿಯಾ ಗೋಲ್ಡನ್ 50' ಎಂಬ ಹೊಸ ಆಫರ್ ಪ್ರಕಟಿಸಿದೆ. ಈ ಆಫರ್ ಮೂಲಕ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರು ಭಾರತದ ಯಾವುದೇ ಎಸ್‌ಟಿಡಿ ಸಂಖ್ಯೆಗೆ ನಿಮಿಷಕ್ಕೆ ಕೇವಲ 50 ಪೈಸೆ ದರದಲ್ಲಿ ಮಾತನಾಡಬಹುದು. ಪ್ರೀ-ಪೇಯ್ಡ್ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರಿಗೆ ಮಾತ್ರ ಅನ್ವಯಿಸುವ ಈ ಹೊಸ ಆಫರ್ ಮಾರ್ಚ್ ಒಂದರಿಂದ ಜಾರಿಗೆ ಬರಲಿದೆ.ಆಸ್ಪತ್ರೆಯಲ್ಲಿ ಕುಳಿತೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಎಸ್ಎನ್ಎಲ್‌ನ ಹೊಸ 3ಜಿ ಸೇವೆಗೆ ಚಾಲನೆ ನೀಡಿದ ಸಂದರ್ಭ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ `ಇಂಡಿಯಾ ಗೋಲ್ಡನ್ 50' ವಿಷಯವನ್ನೂ ಬಹಿರಂಗಪಡಿಸಿದರು. `ಇಂಡಿಯಾ ಗೋಲ್ಡನ್ 50' ಆಫರ್ 375 ರೂಪಾಯಿಗಳ ಪ್ಲಾನ್‌ನಲ್ಲಿ ಲಭ್ಯವಿದ್ದು, ಇದರಲ್ಲಿ ಯಾವುದೇ ಎಸ್‌ಟಿಡಿ ಕರೆಗೆ ನಿಮಿಷಕ್ಕೆ 50 ಪೈಸೆ ಮಾತ್ರ. ಎಸ್‌ಟಿಡಿ ಸಂಖ್ಯೆಗೆ ಎಸ್‌ಎಂಎಸ್ ಕೂಡಾ 50 ಪೈಸೆ ದರದಲ್ಲಿ ಮಾಡಬಹುದು. ಜತೆಗೆ, ಈ ಪ್ಲಾನ್ ಪಡೆದ ಗ್ರಾಹಕರು ಎರಡು ಆಯ್ಕೆಯ ಬಿಎಸ್ಎನ್ಎಲ್ ಸ್ಥಳೀಯ ಸಂಖ್ಯೆಗಳಿಗೆ ನಿಮಿಷಕ್ಕೆ 20 ಪೈಸೆಯಂತೆ ಹಾಗೂ ಒಂದು ಆಯ್ಕೆಯ ಎಸ್‌ಟಿಡಿ ಸಂಖ್ಯೆಗೆ ಕೇವಲ ನಿಮಿಷಕ್ಕೆ 20 ಪೈಸೆಯ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ.ಇದೇ ಸಂದರ್ಭ ಬಿಎಸ್ಎನ್ಎಲ್ ತನ್ನ ದೂರವಾಣಿ ಪ್ಲಾನ್‌ಗಳಲ್ಲೂ ರಿಯಾಯಿತಿ ತೋರಿಸಿದೆ. ಈ ರಿಯಾಯಿತಿಯಲ್ಲಿ ಬಿಎಸ್ಎನ್ಎಲ್ ತನ್ನ 60 ಸೆಕೆಂಡುಗಳ ಪಲ್ಸ್ ಅನ್ನು 120ಕ್ಕೆ ಹೆಚ್ಚಿಸಿದೆ. ಅಂದರೆ, ಬಿಎಸ್ಎನ್ಎಲ್ ದೂರವಾಣಿ ಅದೇ ಹಳೆಯ ದರದಲ್ಲಿ ಅದರ ಎರಡರಷ್ಟು ಮಾತನಾಡುವ ಅವಕಾಶ ಪಡೆದುಕೊಂಡಿದ್ದಾನೆ. |