ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯೋಗ ಪೇಟೆಂಟ್: ಕೊನೆಗೂ ರಕ್ಷಣೆಗೆ ಮುಂದಾದ ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೋಗ ಪೇಟೆಂಟ್: ಕೊನೆಗೂ ರಕ್ಷಣೆಗೆ ಮುಂದಾದ ಭಾರತ
ತನ್ನ ಪಾರಂಪರಿಕ ಜ್ಞಾನವನ್ನು ವಿದೇಶಗಳು ಕದ್ದು ಪೇಟೆಂಟ್ ಗಿಟ್ಟಿಸಿಕೊಳ್ಳುತ್ತಿರುವುದರ ಬಗ್ಗೆ ಕೊನೆಗೂ ಎಚ್ಚೆತ್ತುಕೊಂಡಿರುವ ಭಾರತವು, ಇದೀಗ ದೇಶದ ಹೆಮ್ಮೆಯ ಯೋಗಾಸನಗಳು, ಭಂಗಿಗಳನ್ನು ಗುರುತಿಸಿ, ಪೇಟೆಂಟ್‌ಗೆ ನೋಂದಾಯಿಸುವಂತಾಗಲು ಯೋಗ ಶಿಕ್ಷಕರು ಮತ್ತು 200ರಷ್ಟು ವಿಜ್ಞಾನಿಗಳ ತಂಡವೊಂದನ್ನು ರಚಿಸಿದೆ.

ಭಾರತದ ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿಗೆ ಈಗಾಗಲೇ ಈ ತಂಡವು 600 ಆಸನಗಳನ್ನು ಸೇರಿಸಿದ್ದು, ಅಮೆರಿಕ ಮತ್ತು ಯೂರೋಪ್‌ಗಳಲ್ಲಿ 'ಯೋಗ ಗುರು'ಗಳೆಂದು ಕರೆಸಿಕೊಳ್ಳುತ್ತಿರುವವರು "ಅವು ನಮ್ಮವು" ಎಂದು ಪೇಟೆಂಟ್ ಮಾಡಿಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದಾರೆ.

ಯೋಗಾಸನಗಳೆಲ್ಲವೂ ತಮ್ಮವು ಎಂದು ಹೆಚ್ಚಿನ ಅಮೆರಿಕನ್ ಯೋಗ ಗುರುಗಳ ವಾದವು ಇತ್ತೀಚೆಗೆ ಭಾರತೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು.

1960ರ ದಶಕಾಂತ್ಯದಲ್ಲಿ ಮತ್ತು 1970ರ ಆದಿಭಾಗದಲ್ಲಿ ಯೋಗವು ಅಮೆರಿಕ ಮತ್ತು ಬ್ರಿಟನ್‌ಗೆ ಪ್ರವೇಶಿಸಿತ್ತು. ಆಗ ಬೀಟಲ್ಸ್ ತಂಡದ ಗಿಟಾರಿಸ್ಟ್ ಜಾರ್ಜ್ ಹ್ಯಾರಿಸನ್ ಮತ್ತಿತರರು ಇದನ್ನು ಆ ದೇಶಗಳಲ್ಲಿ ಜನಪ್ರಿಯಗೊಳಿಸಿದ್ದರು. ಅಂದಿನಿಂದ ಅಲ್ಲಿ ಯೋಗ ಎಂಬುದು 225 ಶತಕೋಟಿ ಡಾಲರ್ ಉದ್ಯಮವಾಗಿ ಬೆಳೆದುಬಿಟ್ಟಿತ್ತು.

ಆದರೆ ಭಾರತದಲ್ಲಿ ಇದೊಂದು ಸಾಮುದಾಯಿಕ ಜ್ಞಾನವಾಗಿ ಬೆಳೆದಿದ್ದು, ಬಯಲು ಪ್ರದೇಶಗಳಲ್ಲಿ, ಪಾರ್ಕುಗಳಲ್ಲಿ ಮತ್ತು ಯೋಗ ಶಾಲೆಗಳಲ್ಲಿ ಪ್ರಾಣಾಯಾಮ, ಸೂರ್ಯನಮಸ್ಕಾರ ಮುಂತಾದವುಗಳನ್ನು ಯೋಗ ಗುರುಗಳು ಉಚಿತವಾಗಿ ಜನರಿಗೆ ಕಲಿಸಿಕೊಡುತ್ತಿದ್ದಾರೆ.

ಆದರೆ ಪಾಶ್ಚಾತ್ಯ ಯೋಗ ಗುರುಗಳ ಸಂಖ್ಯೆ ಹೆಚ್ಚಾಗತೊಡಗಿದಂತೆಯೇ, ವಿವಿಧ ಯೋಗಾಸನ ಭಂಗಿಗಳಿಗೆ ಪೇಟೆಂಟ್ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಯಿತು. ನಾವು ನಮ್ಮ ಶಾಲೆಗಳಲ್ಲಿ ಹೇಳಿಕೊಡುತ್ತಿರುವ ಪ್ರತಿಯೊಂದು ಭಂಗಿಯೂ ಪ್ರಾಚೀನವಾದುದಲ್ಲ, ಮನಸ್ಸು ಮತ್ತು ಶರೀರದ ಸ್ವಾಸ್ಥ್ಯಕ್ಕಾಗಿ ನಾವೇ ಸಂಶೋಧಿಸಿರುವುದು ಎಂದೆಲ್ಲಾ ಬೊಗಳೆ ಬಿಡತೊಡಗಿದ್ದರು.

ಅಮೆರಿಕವೊಂದರಲ್ಲೇ 130ಕ್ಕೂ ಹೆಚ್ಚು ಯೋಗಕ್ಕೆ ಸಂಬಂಧಿಸಿದ ಪೇಟೆಂಟ್‌ಗಳು, 150 ಕೃತಿ ಸ್ವಾಮ್ಯಗಳು ಮತ್ತು 2,300ರಷ್ಟು ಟ್ರೇಡ್‌ಮಾರ್ಕ್‌ಗಳಿವೆ ಎಂದರೆ ಭಾರತದ ಈ ಜ್ಞಾನದ ಚಿಲುಮೆಗೆ ಎಂತಹ ಅಪಾಯವಿದೆ ಎಂಬುದು ಮನವರಿಕೆಯಾದೀತು.

ಇದೀಗ ಭಾರತದ ಪಾರಂಪರಿಕ ಜ್ಞಾನ ಜಿಡಿಟಲ್ ಗ್ರಂಥಾಲಯವು ಯೋಗಾಸನಗಳನ್ನೆಲ್ಲಾ ಕಲೆ ಹಾಕುತ್ತಿದ್ದು, ವಿಶ್ವ ಸಮುದಾಯಕ್ಕೆ ಅಥವಾ ಪೇಟೆಂಟ್ ನೀಡುವ ಕಾರ್ಯಾಲಯವು ಇದನ್ನು ನೋಡಿ, ಪರಿಶೀಲಿಸಿ, ಪಾಶ್ಚಾತ್ಯರು ಹೇಳಿಕೊಳ್ಳುತ್ತಿರುವ ಯೋಗ ಭಂಗಿಗಳು ಅವರ 'ಸ್ವಂತ' ಸಂಶೋಧನೆಗಳೇ ಅಥವಾ ಭಾರತೀಯ ವೈದ್ಯ ವಿಜ್ಞಾನದ ಪ್ರಾಚೀನ ಜ್ಞಾನ ಭಂಡಾರದಿಂದಲೇ ಎಂಬುದನ್ನು ತಿಳಿಯಲು ಸಹಕಾರಿಯಾಗಲಿದೆ.

ಈಗ ಒಂಬತ್ತು ಯೋಗ ಶಿಕ್ಷಣ ಕೇಂದ್ರಗಳ ಗುರುಗಳು, ಸರಕಾರಿ ಅಧಿಕಾರಿಗಳು ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿಯ (ಸಿಎಸ್ಐಆರ್) 200ರಷ್ಟು ವಿಜ್ಞಾನಿಗಳು ಮಹಾಭಾರತ, ಭಗವದ್ಗೀತೆ, ಪತಂಜಲಿ ಯೋಗಸೂತ್ರ ಇತ್ಯಾದಿ 35 ಪ್ರಾಚೀನ ಗ್ರಂಥಗಳನ್ನು ಪರಿಶೀಲಿಸಿ, ಅದನ್ನು ಡಿಜಿಟಲ್ ಲೈಬ್ರರಿಗೆ ಸೇರಿಸುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್ಎನ್ಎಲ್: ಮೊಬೈಲ್ ಎಸ್‌ಟಿಡಿ ದರ 50 ಪೈಸೆ!
ವಾರ್ನರ್ ತೆಕ್ಕೆಯಿಂದ ಫಾಕ್ಸ್ ಕೈಸೇರಿದ ಆಸ್ಕರ್ ಗೌರವ
ಭವಿಷ್ಯನಿಧಿ ಬಡ್ಡಿ ಶೇ.8.5ಕ್ಕೆ ಶಿಫಾರಸು
ರಫ್ತು ಘಟಕಗಳಲ್ಲಿ ಉದ್ಯೋಗ ಕಡಿತ
ನೈಸ್‌ ಯೋಜನೆಗೆ ಅಡ್ಡಿ ಬೇಡ: ಆದಿಚುಂಚನಗಿರಿ ಶ್ರೀ
ದೇಶದ ಜಿಡಿಪಿ ದರ ಶೇ.7 ರಷ್ಟಾಗಲಿದೆ:ಮೊಂಟೆಕ್