ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ತಾನು ನೀಡುತ್ತಿರುವ ಸಾಲದ ಬಡ್ಡಿ ದರವನ್ನು 50 ಬೇಸಿಸ್ ಅಂಶಗಳಷ್ಟು ಕಡಿತಗೊಳಿಸಿರುವುದಾಗಿ ಕೃಷಿ ಸಾಲ ಸಂಬಂಧಿಸಿದ ಪರಮೋಚ್ಚ ಸಂಸ್ಥೆ ನಬಾರ್ಡ್ ಸೋಮವಾರ ಪ್ರಕಟಿಸಿದೆ.
ಇದರೊಂದಿಗೆ, ಗ್ರಾಮೀಣ ಭಾರತದಲ್ಲಿ ಈ ಬ್ಯಾಂಕುಗಳಿಂದ ಸಾಲ ಪಡೆದವರಿಗೆ ಇದು ವರದಾಯಕವಾಗಿ ಪರಿಣಮಿಸಲಿದ್ದು, ಬಡ್ಡಿ ದರ ಕಡಿಮೆಯಾಗಲಿದೆ.
'ಹಣಕಾಸು ಮಾರುಕಟ್ಟೆಯ ಪರಿಸ್ಥಿತಿಗಳು, ಆರ್ಥಿಕ ವೈಪರೀತ್ಯಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ' ಎಂದು ನಬಾರ್ಡ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಾಣಿಜ್ಯ ಬ್ಯಾಂಕುಗಳಿಗೆ ಹೊಸ ಬಡ್ಡಿ ದರವು ವಾರ್ಷಿಕ ಶೇ.9 ಆಗಿರಲಿದ್ದು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಲದ ಬಡ್ಡಿದರವನ್ನು ನಬಾರ್ಡ್ ಶೇ.8.5ಕ್ಕೆ ಇಳಿಸಿದೆ. |