ಹೋಂಡಾ ಮೋಟಾರ್ ಸಂಸ್ಥೆಯ ಹೊಸ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗಿ ತಕನೋಬು ಇಟೋ ಅವರನ್ನು ಸೋಮವಾರ ನೇಮಕ ಮಾಡಿದೆ. 55 ವರ್ಷ ವಯಸ್ಸಿನ ಇಟೋ ಈಗಾಗಲೇ ಅಮೆರಿಕದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವವರಾಗಿದ್ದಾರೆ. ಜಪಾನ್‌ನ ನಂ.2 ಅಟೋಮೇಕರ್ ಖ್ಯಾತಿಯ ತೆಕಿಯೋ ಫುಕೈ ಅವರ ಸ್ಥಾನಕ್ಕೆ ಇಟೋ ನೇಮಕಗೊಂಡಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದ ಕಾರು ಮಾರಾಟವನ್ನು ಹೆಚ್ಚಿಸಲು, ಜಪಾನಿನ ಇತರ ಕಾರು ತಯಾರಿಕಾ ಸಂಸ್ಥೆಗಳ ಜತೆಗೆ ಪೈಪೋಟಿ ಹೆಚ್ಚಿಸಲು ಈ ಹೊಸ ನೇಮಕ ಮಾಡಲಾಗಿದೆ. ಯುವ, ಉತ್ಸಾಹಿ ನಾಯಕನ ನೇಮಕದಿಂದ ಕಾರು ಉತ್ಪಾದನಾ ವಲಯದಲ್ಲಿ ಹೊಸ ತಾಂತ್ರಿಕ ಅಭಿವೃದ್ಧಿಗೆ ಚೈತನ್ಯ ಬರಲಿದೆ ಎಂದೇ ಅಂದಾಜಿಸಲಾಗಿದೆ. ಇಂತಹುದೇ ದೊಡ್ಡ ಬದಲಾವಣೆಯನ್ನು ಟೊಯೋಟಾ ಮೋಟಾರ್ ಸಂಸ್ಥೆಯೂ ಮಾಡಿದ್ದು, ಅಕಿಯೋ ತೊಯೋಡಾ ಅವರನ್ನು ನೇಮಕ ಮಾಡಿದೆ. ಕತ್ಸೌಕಿ ವಾತನಬೆ ಅವರ ಸ್ಥಾನಕ್ಕೆ ಈ ನೇಮಕ ನಡೆದಿದೆ. |