ಸರಾಸರಿ ಶೇ.11.5 ಇದ್ದ ಕಾರು ಖರೀದಿ ಸಾಲದ ಬಡ್ಡಿ ದರವನ್ನು ಶೇ.10ಕ್ಕೆ ಇಳಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಘೋಷಣೆ ಹೊರಡಿಸಿದೆಯಲ್ಲದೆ, ಒಂದು ವರ್ಷದ ಕಾಲ ಕಾರು ಸಾಲದ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲು ನಿರ್ಧರಿಸಿದೆ.
ಎಸ್‌ಬಿಐ ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಭಾಗದ ಮಹಾ ಪ್ರಧಾನ ವ್ಯವಸ್ಥಾಪಕ ಡಿ.ಕೆ. ಜೈನ್ ಅವರು ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿತ್ತಾ, ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಆಟೋಮೊಬೈಲ್ ಉದ್ಯಮದ ಮೇಲೂ ಪರಿಣಾಮ ಬೀರಿದ್ದು, ಉತ್ಪಾದನೆ ಮತ್ತು ಬೇಡಿಕೆ ಕುಸಿದಿರುವುದನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಉತ್ಪಾದನೆ ಮತ್ತು ಬೇಡಿಕೆ ಕುಸಿದರೆ, ಉದ್ಯೋಗ ಕಡಿತವೂ ಅನಿವಾರ್ಯವಾಗುತ್ತದೆ ಮತ್ತು ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತದೆ ಎಂದು ಅವರು ವಿಶ್ಲೇಷಿಸಿದರು. |