ಬಂಡವಾಳದ ಹೊರಹರಿವಿನಲ್ಲಿ ಹೆಚ್ಚಳ ಹಾಗೂ ಸ್ಛಳೀಯ ಶೇರುಪೇಟೆ ಕುಸಿತದಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತಗೊಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 49.84/85 ರೂಪಾಯಿಗಳಿಗೆ ಅಂತ್ಯವಾಗಿತ್ತು. ಆದರೆ ಇಂದಿನ ಆರಂಬಿಕ ವಹಿವಾಟಿನಲ್ಲಿ ಮತ್ತಷ್ಟು ಕುಸಿತಗೊಂಡು ಡಾಲರ್‌ಗೆ 49.91/93 ರೂ.ಗಳಿಗೆ ತಲುಪಿದೆ ಶೇರುಪೇಟೆಗಳ ಕುಸಿತದಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಆತಂಕದದಿಂದಾಗಿ ಡಾಲರ್‌ಗಳ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಯಿತು ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ. ಏಷ್ಯಾ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 38 ಡಾಲರ್‌ಗಳಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ಸಂಸ್ಥೆಗಳಿಂದ ಡಾಲರ್‍ಗಳ ಬೇಡಿಕೆಯಲ್ಲಿ ಹೆಚ್ಚಳವಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ. |