ಚಿನ್ನ ಹೊಳೆಯುವ ಆಭರಣವಾದರೂ ಚಿನ್ನದ ಮಾರಾಟದಲ್ಲಿ ಕುಸಿತ ಕಂಡಿದೆ.ಮದುವೆ ಸಮಯವಾಗಿದ್ದರಿಂದ ಗ್ರಾಹಕರು ಚಿನ್ನ ಖರೀದಿಸುವ ಅಗತ್ಯತೆಯಿದ್ದರೂ ಚಿನ್ನದ ದರ ಗಗನಕ್ಕೆ ಏರಿದ್ದರಿಂದ ದರ ಇಳಿಕೆಯನ್ನು ಗ್ರಾಹಕರು ನಿರೀಕ್ಷಿಸುತ್ತಿದ್ದಾರೆ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳಿದ್ದಾರೆ ಚಿನ್ನಾಭರಣ ವ್ಯಾಪಾರದ ಪ್ರತಿ ನಿತ್ಯದ ವಹಿವಾಟಿನಲ್ಲಿ ಶೇ.80 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಏರಿಕೆಯಿಂದಾಗಿ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ದೆಹಲಿ ಮೂಲದ ಪ್ರೇಮ್‌ಜಿ ವಾಲ್ಜಿ ಚಿನ್ನಾಭರಣ ವ್ಯಾಪಾರಿ ಹರೇಶ್ ಸೋನಿ ತಿಳಿಸಿದ್ದಾರೆ. ಸೋಮವಾರದಂದು ಚಿನಿವಾರಪೇಟೆಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 15,600 ರೂಪಾಯಿಗಳಾಗಿದ್ದು, ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 984 ಡಾಲರ್‌ಗಳಿಗೆ ತಲುಪಿದೆ. ಗ್ರಾಹಕರು ಚಿನ್ನದ ದರ ಇಳಿಕೆಯಾಗುವುದೆಂಬ ನಿರೀಕ್ಷೆಯಲ್ಲಿ ಚಿನ್ನ ಖರೀದಿಯಿಂದ ದೂರವಾಗಿದ್ದಾರೆ ಮದುವೆ ಸಮಯ ಮತ್ತು ಪ್ರೇಮಿಗಳ ದಿನಾಚರಣೆಯಂದು ಕೂಡಾ ಚಿನ್ನದ ವಹಿವಾಟಿನಲ್ಲಿ ಏರಿಕೆಯಾಗಿಲ್ಲವೆಂದು ತಿಳಿಸಿದ್ದಾರೆ. ಚಿನ್ನದ ದರ ಏರಿಕೆ ಸಮರ ತಿಂಗಳು ಅಥವಾ ಎರಡು ತಿಂಗಳಲ್ಲಿ ಅಂತ್ಯವಾಗಲಿದ್ದು ಚಿನ್ನದ ದರ ಏರಿಕೆ ತಾತ್ಕಾಲಿಕವಾಗಿದೆ. ಗ್ರಾಹಕರು ಹಳೆಯ ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ ಎಂದು ಚಿನ್ನದ ವ್ಯಾಪಾರಿ ರಾಕೇಶ್ ಆನಂದ್ ತಿಳಿಸಿದ್ದಾರೆ. |