ಜಗತ್ತಿನ ಶ್ರೀಮಂತರ ಸಾಲಿನಲ್ಲಿ ದೇಶದ ಕೈಗಾರಿಕೋದ್ಯಮಿಗಳು ಮುಂಚೂಣಿಯಲ್ಲಿದ್ದರೂ ರೈತರ ಸ್ಥಿತಿ ಶೋಚನಿಯವಾಗಿದೆ ಎಂದು ಕೇಂದ್ರ ಅಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಫೋರ್ಬ್ಸ್ ಪಟ್ಟಿಯ ಟಾಪ್ 10 ಸ್ಥಾನಗಳಲ್ಲಿ ನಾಲ್ಕು ಮಂದಿ ಭಾರತೀಯ ಕೈಗಾರಿಕೋದ್ಯಮಿಗಳು ಸ್ಥಾನಪಡೆದಿರುವುದು ವರದಿಯಾಗಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಟಾಟಾ, ಬಿರ್ಲಾ ಉದ್ಯಮಿಗಳ ಸಂಪತ್ತಿನಲ್ಲಿ ಏರಿಕೆಯಾಗಿದೆ.ರಿಲಯನ್ಸ್ ಕೂಡಾ ಸಂಪತ್ತು ಗಳಿಕೆಯಲ್ಲಿ ಏರಿಕೆ ಕಂಡಿದೆ. ಆದರೆ ರೈತ ಸಮೂಹ ಕಳೆದ ಹಲವು ದಶಕಗಳಿಂದ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ನುಡಿದರು.
ದೇಶದ ಕೈಗಾರಿಕೋದ್ಯಮಿಗಳು ಶ್ರೀಮಂತರಾಗುತ್ತಿರುವುದು ಸಂತಸದ ಸಂಗತಿ. ಆದರೆ ರೈತರ ಸ್ಥಿತಿ ಗತಿ ಏನು? ಎಂದು ಸಚಿವ ಪವಾರ್ ಕಿಸಾನ್ ಮೇಳಾದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ರಸ್ತೆ, ಗ್ರಾಮಗಳ ಅಭಿವೃದ್ದಿ ಹಾಗೂ ಜನಸಂಖ್ಯಾ ಸ್ಫೋಟ ಮತ್ತು ಕೈಗಾರಿಕೋದ್ಯಮದ ಅಭಿವೃದ್ಧಿಗಾಗಿ ದೈಶದ ರೈತರ ಕೃಷಿ ಭೂಮಿ ಕಡಿಮೆಯಾಗುತ್ತಿವೆ ಎಂದು ಪವಾರ್ ಹೇಳಿದ್ದಾರೆ. |