ದ್ವಿಚಕ್ರವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್‌ನ ಸುಝುಕಿ ಮೋಟಾರ್ ಕಾರ್ಪೋರೇಶನ್‌ನ ಶಾಖೆಯಾದ ಸುಝುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಆಲ್-ನ್ಯೂ ಜಿಎಸ್150 ಆರ್ ಮಾಡೆಲ್‌ನ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
150ಸಿಸಿ ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲಿ ಸುಝುಕಿ ಮೋಟಾರ್‌ನ ಆಲ್-ನ್ಯೂ ಜಿಎಸ್150 ಆರ್ ಮಾಡೆಲ್ ಹೊಸ ಕ್ರಾಂತಿಯನ್ನು ತರಲಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಆಲ್-ನ್ಯೂ ಜಿಎಸ್150 ಆರ್ ಮಾಡೆಲ್ ದ್ವಿಚಕ್ರವಾಹನ ನಡೆಸುವ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ದೇಶದ ಖ್ಯಾತ ಕ್ರಿಕೆಟಿಗ ವಿ.ವಿ. ಎಸ್ ಲಕ್ಷ್ಮಣ್, ಸುಝುಕಿ ಗ್ರಾಹಕರು ಮತ್ತು ಕಂಪೆನಿಯ ಅದಿಕಾರಿಗಳ ಸಮ್ಮುಖದಲ್ಲಿ
ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನೂತನ ಮಾಡೆಲ್‌ನ ದ್ವಿಚಕ್ರವಾಹನ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು ವೇಗದಲ್ಲಿ ಬಲಿಷ್ಟವಾಗಿದೆ .ನೋಡಲು ಕೂಡಾ ಸುಂದರವಾಗಿದೆ. ಭಾರತದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಅನುಕೂಲವಾಗಿದೆ ಎಂದು ಸುಝುಕಿಯ (ಮಾರುಕಟ್ಟೆ ಹಾಗೂ ಮಾರಾಟ) ಉಪಾಧ್ಯಕ್ಷರಾದ ಅತುಲ್ ಗುಪ್ತಾ ಹೇಳಿದ್ದಾರೆ. |